ನಮ್ಮ ಶಾಸಕರು ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಳ್ಳೆ ಯೋಜನೆ ಮಾಡಿದ್ದಾರೆ ಎಂದು ಮಂಗಳೂರು ಮೀನುಗಾರರು ತಿಳಿಸಿದ್ದಾರೆ.
ನರೇಂದ್ರ ಮೋದಿಯಂತಹ ಪ್ರಧಾನಮಂತ್ರಿ ನಮಗೆ ಬೇಕು ಎಂದು ಮಂಗಳೂರು ಮೀನುಗಾರರು ತಿಳಿಸಿದ್ದಾರೆ. ಮಕ್ಕಳು ಓದಿಕೊಂಡು ಮನೆಯಲ್ಲೇ ಇದ್ದಾರೆ. ಬಡವರ ಮಕ್ಕಳಿಗೆ ಕೆಲಸ ಸಿಗಬೇಕು. ರಾಹುಲ್ ಗಾಂಧಿ ಅಲ್ಲ, ಮೋದಿ ಬರಬೇಕು. ಕರ್ನಾಟಕದಲ್ಲಿ ಬೊಮ್ಮಾಯಿ ಬರಬೇಕು ಎಂದು ತಿಳಿಸಿದ್ದಾರೆ. ಬಿಜೆಪಿಯೇ ಬರಬೇಕು, ಅವರು ಒಳ್ಳೆಯ ಜನ. ಮತ್ತೆ ಎಲ್ಲಾ ಪಕ್ಷದವರು ದುಡ್ಡಿಗಾಗಿ ಇರುವುದು ಯಾವ ಸರ್ಕಾರ ಬಂದ್ರೂ ಒಳ್ಳೆ ಕೆಲಸವನ್ನು ಮಾಡಿದ್ರೆ ಆಯಿತು ಎಂದರು. ಬಿಜೆಪಿಯಿಂದ ಹಲವು ಅಭಿವೃದ್ಧಿ ಆಗಿದೆ. ನಮ್ಮ ವೋಟು ಬಿಜೆಪಿಗೆ ಎಂದು ಹೇಳಿದ್ದಾರೆ.