Aug 4, 2023, 3:35 PM IST
ಮಲೆನಾಡು ಭಾಗದ ಜನ ಸರ್ಕಾರ ನಿರ್ಮಿಸಿರುವ ರೋಡು-ಬ್ರಿಡ್ಜ್ಗಳಿಗಿಂತ ತಾವೇ ನಿರ್ಮಿಸಿಕೊಂಡ ಕಾಲು ಸಂಕದ(kalu sanka) ಮೇಲೆ ಬದುಕು ಕಟ್ಟಿಕೊಂಡವರೇ ಹೆಚ್ಚು. ಯಾಕಂದ್ರೆ, ಸರ್ಕಾರ ಅವರಿಗೆ ರೋಡು-ಬ್ರಿಡ್ಜ್ ನಿರ್ಮಿಸಿ ಕೊಟ್ಟಿಲ್ಲ. ಪ್ರತಿ ವರ್ಷ ಜನರೇ ರಸ್ತೆ ನಿರ್ಮಿಸಿಕೊಳ್ತಾರೆ. ಮಳೆ ಬಂದಾಗ ಕೊಚ್ಚಿ ಹೋಗುತ್ತೆ. ಮತ್ತೆ ನಿರ್ಮಿಸಿಕೊಳ್ತಾರೆ. ಹಳ್ಳಿಗರ ಈ ಸಾಹಸದ ಬದುಕಿಗೆ ಸ್ವಾತಂತ್ರ್ಯ ಪೂರ್ವ ಇತಿಹಾಸವಿದೆ. ಜನ ಕೂಡ ಇದೇ ರೀತಿ ಬರಬೇಕು. ಕಾರಣ ಕಿರುಸೇತುವೆ ಇಲ್ಲ. ಇದು ಚಿಕ್ಕಮಗಳೂರು ಜಿಲ್ಲೆ(Chikkamagaluru) ಕಳಸ ತಾಲೂಕಿನ ಹಡ್ಲುಮನೆ - ಕೋಣೆಬೈಲು ಗ್ರಾಮದ ಬೇಡಕ್ಕಿ ಹಳ್ಳ. 15-20 ಮನೆಗಳಿರೋ ಕುಗ್ರಾಮ. ಈ ಹಳ್ಳದಲ್ಲಿ ವರ್ಷದ 365 ದಿನವೂ ನೀರು ಹರಿಯುತ್ತೆ. ಮಳೆಗಾಲದಲ್ಲಿ ಇದರ ಅಬ್ಬರ ಕೇಳೋದೇ ಬೇಡ. ಸ್ವಾತಂತ್ರ್ಯ ಬಂದಾಗಿನಿಂದಲೂ ಇವ್ರು ತಾವೇ ನಿರ್ಮಿಸಿಕೊಂಡ ಸಂಕದ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಜನನಾಯಕರು-ಅಧಿಕಾರಿ ವರ್ಗಕ್ಕೆ ನೂರಾರು ಬಾರಿ ಮನವಿ ಮಾಡಿದರು ನೋಡ ಯೂಸ್. ಮಳೆಗಾಲದಲ್ಲಿ(rain) ಮನೆ ಬಾಗಿಲವರೆಗೂ ನೀರು ಬರುತ್ತೆ. 2015ರಲ್ಲಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸಲು 2 ಲಕ್ಷ ರೂಪಾಯಿ ಖರ್ಚು ಮಾಡಿ 2 ಪಿಲ್ಲರ್ ಕೂಡ ಹಾಕಿದ್ರು. ಆದ್ರೆ ಅಂದು ಪಿಲ್ಲರ್ ಹಾಕಿ ಹೋದವರು ಮತ್ತೆ ಇತ್ತ ತಿರುಗಿ ನೋಡಿಲ್ಲ.
ಇದನ್ನೂ ವೀಕ್ಷಿಸಿ: ಈ ಸುದ್ದಿ ವಿಧಾನಸೌಧದಲ್ಲಿ ಸೌಂಡ್ ಮಾಡಿತ್ತು!: ಅಂಗನವಾಡಿ ಕಾರ್ಯಕರ್ತೆಯರು ಈಗ ಫುಲ್ ಖುಷ್..!