ವಿಷ ಕೇಳಿದ ಕುಟುಂಬಕ್ಕೆ ಅಮೃತ ಕೊಡಿಸಿದ ಬಿಗ್ -3: 8 ವರ್ಷಗಳಿಂದ ಆಗದ್ದು ಕೇವಲ 4 ದಿನದಲ್ಲಿ ಆಯ್ತು !

Sep 12, 2023, 12:40 PM IST

ಆ ಕುಟುಂಬ ತಮಗೊಂದು ಸೂರು ಬೇಕೆಂದು ಕಳೆದ 8 ವರ್ಷಗಳಿಂದ ಕಾಯ್ತಿತ್ತು. ಅಧಿಕಾರಿಗಳು ಮಾಡಿದ ಯಡವಟ್ಟು ಹಾಗೂ ತಾಂತ್ರಿಕ ದೋಷಗಳಿಂದ ಆ ಕುಟುಂಬ ತನ್ನ ಪಾಲಿಗೆ ದೊರೆಯಬೇಕಾಗಿದ್ದ ಮನೆಯನ್ನು(House) ಕಳೆದುಕೊಂಡಿತ್ತು. ಜೊಯಿಡಾ(Joida) ತಾಲೂಕಿ‌ನ ಪ್ರಧಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಟ್ಟ ಕಾಡಿನ‌ ನಡುವೆ ಇರುವ ಮಾನಾಯಿ ಗ್ರಾಮದಲ್ಲಿ ನೆಲೆಸಿದ್ದ ಬಡ ಕುಟುಂಬವನ್ನು ಬಿಗ್-3 ತಂಡವು ಹುಡುಕಿಕೊಂಡು ಹೋಗಿತ್ತು. ಆಗಸ್ಟ್ 31ರಂದು ಗರಂ ಆಗಿಯೇ ಸುದ್ದಿ ಪ್ರಸಾರ ಮಾಡಿದ್ವಿ. ಬಿಗ್-3 ಕಾಲಿಟ್ಟಿದ್ದೇ ತಡ ಆ ಕುಟುಂಬದ ಹಣೆ ಬರಹವೇ ಬದಲಾಯ್ತು ನೋಡಿ. ಮನೆ ಕೊಡಿಸುವುದಾಗಿ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಖಂಡೂ ಭರವಸೆ ನೀಡಿದ್ರು. ಸುದ್ದಿ ಪ್ರಸಾರ ಬಳಿಕ ಹೌಸಿಂಗ್ ಬೋರ್ಡ್‌ಗೆ ಕರೆ ಮಾಡಿದ್ದ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ, ಲಕ್ಷ್ಮೀ ಶೇಖಪ್ಪ ಛಲವಾದಿ ಕುಟುಂಬ ಸೇರಿದಂತೆ ಇತರೆ ಫಲಾನುಭವಿಗಳ ತಾಂತ್ರಿಕ ಸಮಸ್ಯೆ ಕೂಡಲೇ ಪರಿಹರಿಸುವಂತೆ ಸೂಚನೆ ನೀಡಿದ್ರು. ಸದ್ಯ ಬಸವ ಹೌಸಿಂಗ್ ಯೋಜನೆಯಡಿ ಮತ್ತೆ ಲಕ್ಷ್ಮೀ ಶೇಖಪ್ಪ ಛಲವಾದಿ ಕುಟುಂಬಕ್ಕೆ ಮನೆ ದೊರೆಯುತ್ತಿದ್ದು, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್(Rajiv Gandhi Housing Board) ವೆಬ್‌ಸೈಟ್‌ನಲ್ಲೂ ಹಳೇ ಮನೆಯ ಫೋಟೋಗಳನ್ನು ತೆಗೆಯಿಸಿ, ಹೊಸ ಮನೆ ನಿರ್ಮಾಣದ ಪಂಚಾಂಗದ ಫೋಟೋ ಅಪ್ಲೋಡ್ ಮಾಡಲಾಗಿದೆ. ಇನ್ಮುಂದೆ ಈ ಕುಟುಂಬಕ್ಕೆ ಹಂತ ಹಂತವಾಗಿ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಲಿದ್ದು, ಕಣ್ಣೀರು ಸುರಿಸುತ್ತಿದ್ದ ಈ ಕುಟುಂಬ ಇದೀಗ ಸಂತೋಷದಿಂದ ಮನೆ ನಿರ್ಮಾಣದ ಕೆಲಸಕ್ಕೆ ತಯಾರಾಗುತ್ತಿದೆ. ಇನ್ಮುಂದೆ ಹಂತ ಹಂತವಾಗಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರೆಯಲಿದೆ. ಕೆಲವೇ ದಿನಗಳಲ್ಲಿ ಶೆಡ್ ವಾಸದಿಂದ ಮುಕ್ತಿ ಸಿಗಲಿದ್ದು. ಸದ್ಯ ಲಕ್ಷ್ಮೀ ಶೇಖಪ್ಪ ಛಲವಾದಿ ಕುಟುಂಬ ಫುಲ್ ಖುಷಿಯಲ್ಲಿದೆ.

ಇದನ್ನೂ ವೀಕ್ಷಿಸಿ:  ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಮೀಟಿಂಗ್: ತಮಿಳುನಾಡು ಕ್ಯಾತೆಗೆ ಮಣಿಯುತ್ತಾ ಸಮಿತಿ..?