Oct 19, 2021, 2:20 PM IST
ಚಿಕ್ಕಮಗಳೂರು (ಆ.19): ಪಾಳು ಬಿದ್ದಿರುವ ಪಂಪ್ ಹೌಸ್, ಒಡೆದಿರುವ ಪೈಪ್, ತುಕ್ಕು ಹಿಡಿಯುತ್ತಿರುವ ಎಲೆಕ್ಟ್ರಿಕ್ ಉಪಕರಣಗಳು, ನೀರು ಸುರಿದು ವ್ಯರ್ಥವಾಗುತ್ತಿರುವುದು ಇದೆಲ್ಲಾ ಚಿಕ್ಕಮಗಳೂರು ಜಿಲ್ಲೆ ಮಳಲೂರು ಏತ ನೀರಾವರಿ ಯೋಜನೆಯ ದುಸ್ಥಿತಿ.
ಚಿಕ್ಕಮಗಳೂರು: ಈರುಳ್ಳಿ ಬೆಳೆದ ರೈತರು ಕಂಗಾಲು, ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ
ಮೂಡಿಗೆರೆ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇತ್ತು. ಇದಕ್ಕಾಗಿ ಅನೇಕ ರೈತರಿಂದ 19 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಈ ಯೋಜನೆ ಮಾತ್ರ ಇನ್ನೂ ಕಾರ್ಯಗತವಾಗದೇ ಪಾಳು ಬಿದ್ದಿದೆ. ರೈತರಿಗೆ ಪರಿಹಾರವನ್ನೂ ನೀಡಿಲ್ಲ.