Dharwad| ಅನ್ನದಾತನಿಗೆ ಪೆಟ್ಟಿನ ಮೇಲೆ ಪೆಟ್ಟು, ಬತ್ತದ ಕಣ್ಣೀರು..!

Dharwad| ಅನ್ನದಾತನಿಗೆ ಪೆಟ್ಟಿನ ಮೇಲೆ ಪೆಟ್ಟು, ಬತ್ತದ ಕಣ್ಣೀರು..!

Published : Nov 18, 2021, 02:35 PM IST

*  ಕಂಟಕವಾಗಿರುವ ಮಳೆಗೆ ಅನ್ನದಾತನ ಸ್ಥಿತಿ ಕಂಗಾಲು
*  ನೆಲ ಕಚ್ಚಿರುವ ಭತ್ತದ ಬೆಳೆ, ಕಟಾವಿಗೆ ಬಂದ ಕಬ್ಬು
*  ನೀರಿನಲ್ಲಿ  ಕೊಚ್ಚಿಹೋಯ್ತು ಸಾವಿರಾರು ಎಕರೆ ಬೆಳೆ 
 

ಧಾರವಾಡ(ನ.18): ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ, ನಿಗದಿ,ದೇವಗೇರಿ, ಸರಿದಂತೆ 10 ಕ್ಕೂ ಹೆಚ್ಚು ಗ್ರಾಮಗಳಲ್ಲಿಯ ರೈತರ ಬೆಳೆದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಇನ್ನು ಕಳೆದ ಮೂರು ವರ್ಷಗಳಿಂದ ಹಿಂಗಾರು ಬೆಳೆ, ಮುಂಗಾರು ಬೆಳೆಗಳು ನಮ್ಮ ಕೈ ಸೇರ್ತಿಲ್ಲ, ಇನ್ನೇನು ಕಟಾವಿಗೆ ಬಂದ ಬೆಳೆಗಳು ರೈತರ ಕೈಗೆ ಸೇರ್ತಿಲ್ಲ, ನಮ್ಮ ಊರಿನ ಹಳ್ಳ ಹೂಳೆತ್ತದ ಕಾರಣಕ್ಕೆ ಹಳ್ಳದ ಪಕ್ಕ ಇರೋ ಜಮಿನುಗಳಲ್ಲಿ ನೀರು ನುಗ್ಗಿ 1000 ಕ್ಕೂ ಹೆಚ್ಚು ಎಕರೆಯಷ್ಟು ಬೆಳೆ ನೀರಿನಲ್ಲಿ ಕೊಚ್ಚಿಕ್ಕೊಂಡು ಹೋಗಿದೆ. ಹೀಗೆಲ್ಲ ಪದೆ ಪದೆ ರೈತರಿಗೆ ಮಳೆರಾಯ ತೊಂದರೆ ಕೊಟ್ರೆ ನಾವು ನೇಣು ಹಾಕಿಕೊಳ್ಳೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. 

Mysuru : ಮುಂದುವರಿದ ಮಳೆಯಬ್ಬರ : ಅಂಗಡಿ ಮಳಿಗೆಗಳು ನೆಲಸಮ

ಇನ್ನು ಅಂಬ್ಲಿಕೊಪ್ಪ ಗ್ರಾಮಸ್ಥರು ಕಲಘಟಗಿ ಶಾಸಕಸಿಎಂ ನಿಂಬನ್ನವರ ನಮ್ಮ ಗ್ರಾಮಕ್ಕೆ ಬಂದು ಮೂರು ವರ್ಷ ಕಳೆದಿದೆ. ಕೇವಲ ಚುನಾವಣೆ ಇದ್ದಾಗ ಮಾತ್ರ ಬಂದು ಮತ ಹಾಕಿಸಿಕೊಂಡು ಹೋಗ್ತಾರೆ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅವರು ನಮ್ಮ ಗ್ರಾಮಕ್ಕೆ ಶಾಸಕರಾದ ಬಳಿಕ ಒಂದೇ ಒಂದು ದಿನ ಬಂದು ರೈತರ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲ್ಲ ಎಂದು ರೈತರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ‌. ಇನ್ನು 1000 ಕ್ಕೂ ಹೆಚ್ಚು ಎಕರೆಯಷ್ಟು ಬೆಳೆದ ಬೆಳೆಗಳಿಗೆ ಪರಿಹಾರವನ್ನ ಕೊಡಬೇಕು ನಾವು ಬೆಳೆದ ಬೆಳೆ ಎಲ್ಲವೂ ನೀರು ಪಾಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. 
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more