ಭೂ ನುಂಗಣ್ಣರಿಗೆ ಶುರುವಾಯ್ತು ಢವಢವ: 5 ಸಾವಿರ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ ಆರೋಪ

Aug 13, 2023, 10:47 AM IST

ಮೂಡಿಗೆರೆ ಅಪ್ಪಟ ಮಲೆನಾಡು. ಕಡೂರು ಬಯಲುಸೀಮೆ. ಚಿಕ್ಕಮಗಳೂರಿನ(Chikkamagaluru) ಈ ಎರಡೂ ತಾಲೂಕುಗಳಲ್ಲಿ ಸರ್ಕಾರಿ ಭೂಮಿ(government land) ನುಂಗಿ ನೀರು ಕುಡಿದ ಆರೋಪ ಕೇಳಿ ಬಂದಿದೆ. ಮೂಡಿಗೆರೆಯಲ್ಲಿ 1400, ಕಡೂರಲ್ಲಿ 3500 ಎಕರೆ.. ಒಟ್ಟು ಸುಮಾರು 5 ಸಾವಿರ ಎಕರೆಗೂ ಹೆಚ್ಚು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ಆರೋಪವಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಸರ್ಕಾರಿ ಭೂಮಿಗೆ ನಕಲಿ ಅಪ್ಪ-ಅಮ್ಮನನ್ನು ಸೃಷ್ಠಿಸಿ ಭೂಮಿ ಕಬಳಿಸಿರುವ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲೇ ಅತಿ ದೊಡ್ಡ ಲ್ಯಾಂಡ್ ಸ್ಕ್ಯಾಂ(Land Scam) ಎನ್ನಲಾಗ್ತಿದೆ. ಇದೀಗ ಈ ಹಗರಣದ ತನಿಖೆಗೆ ಸರ್ಕಾರ ಆದೇಶ ನೀಡಿದ್ದು ಭೂ ನುಂಗಣ್ಣರಿಗೆ ನಡುಕ ಶುರುವಾಗಿದೆ. ಸತ್ತವರ ಹೆಸರಲ್ಲಿ. ಆ ಊರಲ್ಲಿ ವಾಸವೇ ಇಲ್ಲದವರ ಹೆಸರಲ್ಲೂ ಸರ್ಕಾರಿ ಅಕ್ರಮವಾಗಿ ಖಾತಾ ಮಾಡಿಕೊಡಲಾಗಿದೆಯಂತೆ. ಭೂಮಿ ಮಂಜೂರು ಮಾಡಿಸಿಕೊಂಡವರ ಪೈಕಿ ರಾಜಕೀಯ ನಾಯಕರ ಹಿಂಬಾಲಕರೂ ಇದ್ದಾರಂತೆ. ಭೂ ಗೋಲ್ಮಾಲ್ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ. ಸರ್ಕಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದು, ತನಿಖೆಗಾಗಿ 15 ತಹಶೀಲ್ದಾರ್‌ರನ್ನ ನೇಮಕ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಉಡುಪಿ ವಿಡಿಯೋ ಪ್ರಕರಣ: ಮೂವರು ವಿದ್ಯಾರ್ಥಿನಿಯರಿಗೆ PFI ಸಂಪರ್ಕವಿದೆಯಾ..?