Belagavi| ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಪತಿ..!

Nov 7, 2021, 1:54 PM IST

ಬೆಳಗಾವಿ(ನ.07):  ನಿಮೋನಿಯಾದಿಂದ(Pneumonia) ಮೃತಪಟ್ಟ(Death) ಪತ್ನಿಯ ನೆನಪಲ್ಲಿ ಪತಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಹೌದು, ಬೆಳಗಾವಿ(Belagavi) ನಗರದ ಶಿವಾ ಚೌಗಲೆ ಎಂಬುವರೇ ತಮ್ಮ ಹೆಂಡತಿ ಮಾಜಿ ಮಹಾನಗರ ಪಾಲಿಕೆ ಸದಸ್ಯೆ ದಿ.ಮೈನಾಬಾಯಿ ಚೌಗಲೆ ಅವರ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ದೀಪಾವಳಿ ಹಬ್ಬದ ದಿನವೇ ಮೃತ ಪತ್ನಿಯ ಮೂರ್ತಿಯನ್ನ ಶಿವಾ ಚೌಗಲೆ ಸ್ಥಾಪನೆ ಮಾಡಿದ್ದಾರೆ. ಬೆಳಗಾವಿ ಮರಗಾಯಿ ನಗರದ ನಿವಾಸದಲ್ಲಿ ಮೂರ್ತಿ ಸ್ಥಾಪನೆಯಾಗಿದೆ. 

BJP Core Committee Meeting: ಸಿಎಂ ಬೊಮ್ಮಾಯಿ ಜೊತೆ RSS ಮುಖಂಡ ಮುಕುಂದ್ ಮಹತ್ವದ ಚರ್ಚೆ

2021ರ ಮೇ ತಿಂಗಳಲ್ಲಿ ಶಿವಾ ಚೌಗಲೆ ಹಾಗೂ ಮೈನಾಬಾಯಿ ಚೌಗಲೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಶಿವಾ ಚೌಗಲೆಗೆ ಕೋವಿಡ್(Covid19) ಸೋಂಕು ತಗಲಿದ್ರೆ ಪತ್ನಿ ಮೈನಾಬಾಯಿಗೆ ನಿಮೋನಿಯಾ ಜ್ವರವಿತ್ತು. ಆದರೆ ಮೈನಾಬಾಯಿ ಚೌಗುಲೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಪತ್ನಿ ನೆನೆಪು ಸದಾ ಕಾಡುತ್ತಿದ್ದರಿಂದ ಮೂರ್ತಿ(statue) ಸ್ಥಾಪನೆ ಬಗ್ಗೆ ಶಿವಾ ಚೌಗಲೆ ನಿರ್ಧಾರ ಮಾಡಿದ್ದರು. ಜ್ಯೋತಿಷಿಗಳ(Astrologer) ಸಲಹೆ ಮೇರೆಗೆ ಪತ್ನಿಯ ಮೂರ್ತಿಯನ್ನ ನಿರ್ಮಾಣ ಮಾಡಿದ್ದಾರೆ ಶಿವಾ ಚೌಗಲೆ. 

Puneeth ಸಮಾಧಿ ಬಳಿ ಸಪ್ತಪದಿ ತುಳಿಯಲು ಮುಂದಾದ ಜೋಡಿ, ನೇತ್ರದಾನಕ್ಕೆ ಸಾವಿರಾರು ಮಂದಿ ನೋಂದಣಿ

ಮೈನಾಬಾಯಿ ಮೂರ್ತಿ ಸ್ಥಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಮನೆಯ ಮುಂದೆ ಪೆಂಡಾಲ್, ಬಂಧು, ಬಳಗಕ್ಕೆ ಊಟದ ವ್ಯವಸ್ಥೆ ಮಾಡಿ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಮನೆಯ ಮೇಲಿನ ಕೋಣೆಯಲ್ಲಿ ಮೈನಾಬಾಯಿ ಮೂರ್ತಿ ಸ್ಥಾಪನೆಯಾಗಿದೆ. ಮೂರ್ತಿಯ ಜತೆಗೆ ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿ ಎಲ್ಲಾ ವಸ್ತುಗಳು ಇಡಲು ವಾರ್ಡರೂಬ್ ವ್ಯವಸ್ಥೆಯನ್ನ ಕೂಡ ಮಾಡಿಸಲಾಗಿದೆ. ಶಿವಾ ಚೌಗಲೆ, ಮೈನಾಬಾಯಿ ಇಬ್ಬರು ಮಾಹನಗರ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದರು. ಒಂದು ಅವಧಿಗೆ ಮೈನಾಬಾಯಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ಪತ್ನಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪನೆ‌ ಮಾಡಿ ಅಭಿವೃದ್ಧಿ ಕಾರ್ಯ ನಡೆಸಲು ಪತಿ ಶಿವಾ ಚೌಗಲೆ ನಿರ್ಧರಿಸಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮೂರ್ತಿ ತಯಾರಾಗಿದೆ.