Apr 17, 2022, 4:39 PM IST
ಹುಬ್ಬಳ್ಳಿ (ಏ. 17): ಹುಬ್ಬಳ್ಳಿ ಗಲಭೆಗೆ ಸಂಬಂದತಪಟ್ಟಂತೆ ಈವರೆಗೂ 8 ಪ್ರತ್ಯೇಕ ಎಫ್‌ಐಆರ್ (FIR) ದಾಖಲಾಗಿದ್ದು ಬಂಧಿತರ ಸಂಖ್ಯೆ ನೂರರ ಗಡಿ ದಾಟಿದೆ. ಇನ್ನು ಕಲ್ಲು ತೂರಾಟದಲ್ಲಿ ಮಕ್ಕಳು ಭಾಗಿಯಾಗಿದ್ದು ಬಂಧಿತರಲ್ಲಿ ಮೂವರು ಬಾಲಾಪರಾದೀಗಳು ಇದ್ದಾರೆ. ಬಂಧಿತರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ. ಹುಬ್ಬಳಿ ಹಿಂಸಾಚಾರ ಬಳಿಕ ಖಾಕಿ ಅಲರ್ಟ್ ಆಗಿದ್ದು ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ನಗರದಾದ್ಯಂತ 24 ಗಂಟೆ 144 ಸೆಕ್ಷನ್ ಜಾರಿಗೆ ಕಮಿಷನರ್ ಅದೇಶ ಹೊರಿಡಿಸಿದ್ದಾರೆ.
ಇದನ್ನೂ ಓದಿ: Hubli Riots: ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡನ ಸಾಥ್!
ಇನ್ನು ಹುಬ್ಬಳ್ಳಿ ನಗರದಲ್ಲಿ 10 ಕೆಎಸ್‌ಆರ್‌ಪಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದ್ದು ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆಗುಕೊಳ್ಳಲಾಗುವುದು ಎಂದು ಕಮಿಷನರ್ ಲಾಬೂರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹೊರ ಜಿಲ್ಲೆಗಳಿಂದ ಪೊಲೀಸ್ ಪಡೆಗಳು ಆಗಮಿಸಿವೆ. ಮತ್ತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.