Uttara Kannada:ಸಿದ್ಧಾಪುರದಲ್ಲಿ ಹಿಟ್ ಆ್ಯಂಡ್ ರನ್; ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು

Jan 15, 2025, 2:42 PM IST

ಕಾರವಾರ (ಜ.15): ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಭಕ್ತಾಧಿಗಳ ಮೇಲೆ  ಕಾರು ಹಿದಿದೆ. ದುರ್ಘಟನೆಯಲ್ಲಿ ಓರ್ವ ಯುವತಿ ಸಾವು ಕಂಡಿದ್ದು, 8 ಮಂದಿಗೆ ಗಂಭೀರ ಗಾಯವಾಗಿದೆ. ಸಿದ್ಧಾಪುರದ ರವೀಂದ್ರ ನಗರ ಸರ್ಕಲ್ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದೆ. ಸಿದ್ಧಾಪುರ ಕವಲಕೊಪ್ಪದ ದೀಪಾ ರಾಮಗೊಂಡ (21) ಸಾವಿಗೀಡಾದ ಯುವತಿ. ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ ಹಾಗೂ ಗಜಾನನ ಅವರಿಗೆ ಗಂಭೀರ ಗಾಯವಾಗಿದ್ದು, ಗಾಯಗೊಂಡವರಿಗೆ ಸಿದ್ಧಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಗಾಯಗೊಂಡವರ ಪೈಕಿ ಕಲ್ಪನಾ ನಾಯ್ಕ್ (5) ಹಾಗೂ ಇನ್ನೋರ್ವ ಮಹಿಳೆಯನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಮಕರ ಸಂಕ್ರಮಣ ಹಿನ್ನೆಲೆ ಅಯ್ಯಪ್ಪ ಸ್ವಾಮಿ ಮಂದಿರದ ಜಾತ್ರೆಗೆ ನೂರಾರು ಮಂದಿ ಸೇರಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಭಕ್ತರ ಮೇಲೆ ರೋಶನ್ ಫೆರ್ನಾಂಡೀಸ್ ಕಾರು ಹರಿಸಿದ್ದಾನೆ. ಅತೀ ವೇಗದಲ್ಲಿ ತನ್ನ ಇಕೋ ಸ್ಪೋರ್ಟ್ ಕಾರನ್ನು ಯರ್ರಾಬಿರ್ರಿ ಚಲಾಯಿಸಿದ್ದ. ದೇವಸ್ಥಾನದ ಮಂಟಪಕ್ಕೆ ಢಿಕ್ಕಿ ಹೊಡೆದ ನಂತರ ಜನರ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದ.

Uttara Kannada: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ನುಗ್ಗಿದ ಚಿರತೆ

ಆಕ್ರೋಶಗೊಂಡ ಭಕ್ತಾಧಿಗಳಿಂದ ಆರೋಪಿಯ ಕಾರಿನ ಮೇಲೆ ಕಲ್ಲೆಸೆತ, ಗ್ಲಾಸು ಪುಡಿಪುಡಿ ಮಾಡಲಾಗಿದೆ. ಹರಸಾಹಸಪಟ್ಟು ಆರೋಪಿಯನ್ನು ಠಾಣೆಗೆ ಪೊಲೀಸರು ಎಳೆದೊಯ್ದಿದ್ದಾರೆ. ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ರೋಶನ್ ಫೆರ್ನಾಂಡೀಸ್ ವಿರುದ್ಧ ಪ್ರಕರಣ ದಾಖಲಾಗಿದೆ.