ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?

Oct 13, 2023, 10:35 AM IST

ಕಾವೇರಿ ನೀರಿಗಾಗಿ ತಮಿಳುನಾಡು ಜಿದ್ದಿಗೆ ಬಿದ್ದಿದೆ. ತಮಿಳುನಾಡು ಮೊಂಡಾಟ, ಹಠವಾಧಿ ನಡೆಯಿಂದಲೇ ನೀರು ಪಡೆಯುತ್ತಿದೆ. ಮೊನ್ನೆ ಕೂಡ ನಿತ್ಯ 3 ಸಾವಿರ ಕ್ಯೂಸೆಕ್ನಂತೆ 15 ದಿನ ತಮಿಳುನಾಡಿಗೆ ನೀರು ಬಿಡುವಂತೆ CWRC ಸೂಚಿಸಿದೆ. ಕರ್ನಾಟಕದಲ್ಲೇ(Karnataka) ನೀರಿಲ್ಲದೆ ಬರ ತಾಂಡವವಾಡ್ತಿದೆ. ಬರದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ(Tamilnadu) ನೀರು ಬಿಟ್ಟು ಆದೇಶ ಪಾಲಿಸುತ್ತಿದೆ.. ಇದರಿಂದ ಕಾವೇರಿ ನೀರನ್ನೇ ನಂಬಿಕೊಂಡಿದ್ದ ಮಂಡ್ಯ, ಮೈಸೂರು, ಬೆಂಗಳೂರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ ಕಾವೇರಿ(Cauvery) ನೀರಿನ ಬರ ತುಮಕೂರು ಜಿಲ್ಲೆಗೂ ತಟ್ಟಿದೆ. ತುಮಕೂರು ಜನ ಕುಡಿಯೋ ನೀರಿಗಾಗಿ ಹೇಮಾವತಿ ನೀರನ್ನೇ ಅವಲಂಬಿಸಿದ್ದಾರೆ. ಹಾಸನದ ಗೋರೂರು ಡ್ಯಾಂನಿಂದ ತುಮಕೂರು(Tumakuru) ಜಿಲ್ಲೆಗೆ ಹೇಮಾವತಿ ನೀರು ಪೂರೈಕೆ ಆಗುತ್ತೆ..ಆದ್ರೆ ಈ ಬಾರಿ ಹೇಮಾವತಿ(Hemavati) ಮೂಲಕ ತಮಿಳುನಾಡಿಗೆ ಸರ್ಕಾರ ನೀರು ಹರಿಸಿದೆ. ಹೀಗಾಗಿ ಗೋರಾರು ಜಲಾಶಯದಲ್ಲಿ 14 ಟಿಎಮ್‌ಸಿ ನೀರು ಇದೆ ಎನ್ನಲಾಗ್ತಿದೆ. ಇಷ್ಟು ನೀರು ತುಮಕೂರು ಹಾಗೂ ಹಾಸನ ಜಿಲ್ಲೆಗೆ ಹರಿಸಲು ಸಾಲುತ್ತಿಲ್ಲ. ತುಮಕೂರು  ಜಿಲ್ಲೆಗೆ ಗೋರಾರು ಜಲಾಶಯದಿಂದ ಪ್ರತಿ ವರ್ಷ 25 TMC ನೀರು ಬಿಡಬೇಕು..ಆದ್ರೆ ಇಲ್ಲಿವರೆಗೆ ಕೇವಲ 5 TMC ನೀರು ಮಾತ್ರ ಹರಿಸಿದೆ. ಇನ್ನು 20 ಟಿಎಂಸಿ ನೀರು ಬಿಡಬೇಕಿರುವ ಜಲಾಶಯದಲ್ಲೇ 14 ಟಿಎಂಸಿ ನೀರಿದ್ದು ಇದು ಎರಡು ಜಿಲ್ಲೆಗೆ ಹಂಚಿಕೆ ಆಗಬೇಕು. ಈ ನೀರು ಡಿಸೆಂಬರ್ ತನಕ ಮಾತ್ರ ಕುಡಿಯೋಕೆ ಸಾಧ್ಯವಾಗುತ್ತೆ. ಆ ನಂತರ ತುಮಕೂರಿನ ಜನ ಕುಡಿಯೋ ನೀರಿಗೂ ಪರದಾಡಬೇಕಾಗುತ್ತೆ. ಹೀಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಸನ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮತ್ತು ತುಮಕೂರು ಉಸ್ತುವಾರಿ ಸಚಿವ ಜಿ.ಪರಮೇಶ್ವರ್‌ಗೆ ಪತ್ರ ಬರೆದಿದ್ದು ಜಿಲ್ಲೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್: 72ರ ರಜಿನಿಕಾಂತ್ ಹೈ ಬಿಪಿ ಬಂದಾಗ ಏನ್ಮಾಡಿದ್ರು ಗೊತ್ತಾ?