Nov 18, 2021, 1:01 PM IST
ಮೈಸೂರು (ನ.18): ಮೈಸೂರಿನಲ್ಲಿ (Mysuru) ಮಳೆಯ ಅವಾಂತರ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು (Rain), ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಇದೀಗ ಮೈಸೂರಲ್ಲಿ ವರುಣನ ಅಬ್ಬರಕ್ಕೆ ಅಶೋಕ ರಸ್ತೆಯ ಮೂರು ಅಂಗಡಿ ಮಳಿಗೆಗಳು ಕುಸಿದಿವೆ.
Mandya ಜಿಲ್ಲೆಯಲ್ಲಿ 826.1 ಮಿಮೀ ದಾಖಲೆ ಮಳೆ
ರಾತ್ರಿ ಸುರಿದ ಭಾರಿ ಮಳೆಯಿಂದ ಶಿಥಿಲವಾಗಿದ್ದ ಮಳಿಗೆಗಳು ಕುಸಿದು ಬಿದ್ದಿವೆ. ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಕಟ್ಟಗಳು (Building) ಸಂಪೂರ್ಣ ನೆಲಸಮವಾಗಿವೆ. ಸಂತ ಫಿಲೊಮಿನಾ ಚರ್ಚ್ಗೆ ಸೇರಿದ ಆಸ್ತಿಯಾಗಿದ್ದು, ಕುಸಿದು ಬಿದ್ದಿದೆ. ಮೈಸೂರಿನಲ್ಲಿ ಅತ್ಯಂತ ಹಳೆಯ ಕಟ್ಟಡಗಳೇ ಹೆಚ್ಚಾಗಿದ್ದು ಮಳೆಯಿಂದ ಮತ್ತಷ್ಟು ಆತಂಕ ಎದುರಾಗಿದೆ.
ಇನ್ನು ರಾಜ್ಯದ ಹಲವು ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ತತ್ತರಿಸಿದೆ. ರೈತ ಸಮುದಾಯ ಕಂಗಾಲಾಗಿದೆ.