Zika Virus: ಕರ್ನಾಟಕದಲ್ಲಿ ಝೀಕಾ ವೈರಸ್ ಪತ್ತೆ: ಲಕ್ಷಣಗಳು ಏನು ಗೊತ್ತಾ?

Dec 13, 2022, 11:02 AM IST

ರಾಯಚೂರು: ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಝೀಕಾ ಸೋಂಕು ದೃಢಪಟ್ಟಿದೆ. ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. ಝೀಕಾ ವೈರಸ್‌ ಬಗ್ಗೆ ಯಾರು ಆತಂಕಪಡುವ ಅಗತ್ಯವಿಲ್ಲ. ಈ ಬಗ್ಗೆ ಲ್ಯಾಬ್‌ನಿಂದ ರಿಪೋರ್ಟ್‌ ಬಂದಿದೆ ಡಿ. 5ರಂದು ಮೂರು ಸ್ಯಾಂಪಲ್‌ಗಳನ್ನು ಪುಣೆ ಲ್ಯಾಬ್‌'ಗೆ ಕಳುಹಿಸಲಾಗಿದೆ. ಝೀಕಾ ವೈರಸ್‌ ತಡೆಗೆ ಪ್ರತ್ಯೇಕ ಗೈಡ್‌ಲೆನ್ಸ್‌ ನೀಡಲಾಗುತ್ತದೆ ಎಂದರು. ಇನ್ನು ಇದರ ಲಕ್ಷಣಗಳು ತೀವ್ರ ಜ್ವರ, ಮೈ ಕೈ ನೋವು, ಕೀಲು ನೋವು, ಮೈ ಮೇಲೆ ಗುಳ್ಳೆಗಳು ಕಣ್ಣು ಕೆಂಪಗಾಗೋದು ಆಗಿವೆ. ಇದು ಈಡೀಸ್‌ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತದೆ.

ಸೈಕ್ಲೋನ್‌ ಹೊಡೆತ: ಮಕ್ಕಳ, ಹಿರಿಯರ ಅನಾರೋಗ್ಯ ಉಲ್ಬಣ