ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಂದ್.. ಬಡವರ ಪರದಾಟ

ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಂದ್.. ಬಡವರ ಪರದಾಟ

Published : Oct 06, 2023, 11:22 AM IST

ಹಸಿವು ಮುಕ್ತ ಕರ್ನಾಟಕಕ್ಕಾಗಿ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಹಳ್ಳಹಿಡಿದಿದೆ. ಹಸಿವು ನೀಗಿಸೋ ಬದಲು ಬಡವರ ನರಳಾಟಕ್ಕೆ ಕಾರಣವಾಗಿದೆ.
 

ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ(Siddaramaiah) ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್(Indira Canteen) ತೆರೆದಿದ್ರು.. 2013ರಲ್ಲಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಜಾರಿಗೆ ತಂದ   ಜನಪ್ರಿಯ ಯೋಜನೆಯಲ್ಲೊಂದಾದ ಇಂದಿರಾ ಕ್ಯಾಂಟೀನ್ಗೆ, 2023ರಲ್ಲಿ ಸಿದ್ದರಾಮಯ್ಯ ಅವಧಿಯಲ್ಲೇ  ಗ್ರಹಣ ಹಿಡಿದಿದೆ. ಇದು ಹಾವೇರಿ(Haveri) ಜಿಲ್ಲೆಯಲ್ಲಿ ಸಿದ್ದರಾಮಯ್ಯ ಕನಸಿನ ಯೋಜನೆ ಹಳ್ಳಹಿಡಿದ ಸ್ಟೋರಿ. ಸರಿಯಾದ ನಿರ್ವಹಣೆಯಿಲ್ಲದೇ ಜಿಲ್ಲೆಯಾದ್ಯಂತ ಬಹುತೇಕ ಇಂದಿರಾ ಕ್ಯಾಂಟೀನ್ ಕ್ಲೋಸ್ ಆಗಿವೆ. ಜಿಲ್ಲೆಯಲ್ಲಿ 3 ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದ್ರೆ, ಮೂರು ಕ್ಯಾಂಟೀನ್ಗಳು ಕ್ಲೋಸ್ ಆಗಿವೆ. ಹಾವೇರಿ ನಗರದ ಪಶು ಸಂಗೋಪನೆ ಇಲಾಖೆ ಕಚೇರಿ ಬಳಿಯೇ ಒಂದು ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆರಂಭದ ಒಂದೆರಡು ವರ್ಷ ಜನರು ಸಾಲುಗಟ್ಟಿನಿಂತು ಟೋಕನ್ ಪಡೆದು ಊಟ, ಉಪಾಹಾರ ಮಾಡುತ್ತಿದ್ದರು. ಆದರೆ, ಬರುಬರುತ್ತ ಕ್ಯಾಂಟೀನ್ ಸರಿಯಾಗಿ ನಿರ್ವಹಣೆ ಮಾಡದೇ ಬಂದ್ ಮಾಡಿದ್ದಾರೆ. ಇದೀಗ ಈ ಕ್ಯಾಂಟೀನ್ ಕ್ಯಾಂಟೀನ್ ಪುಂಡ ಪೋಕರಿಗಳ ಅಡ್ಡೆಯಾಗಿದೆ. ಜಿಲ್ಲಾಸ್ಪತ್ರೆಗೆ ಹತ್ತಿರವೇ ಈ ಇಂದಿರಾ ಕ್ಯಾಂಟಿನ್ ಇದ್ದಿದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರಿಗೆ ಆಸರೆಯಾಗಿತ್ತು. ನಗರದಲ್ಲಿನ ಬಡವರ ಹಸಿವನ್ನೂ ನೀಗಿಸುತ್ತಿದ್ದ ಕ್ಯಾಂಟೀನ್ ಈಗ ಕ್ಲೋಸ್ ಆಗಿದೆ. ಹಾವೇರಿ ಜಿಲ್ಲೆಗೆ ಒಟ್ಟು 8 ಇಂದಿರಾ ಕ್ಯಾಂಟೀನ್ಗಳನ್ನು ಮಂಜೂರು ಮಾಡಲಾಗಿದೆ. ಆದ್ರೆ, ಮೂರು ಕ್ಯಾಂಟೀನ್ಗಳನ್ನು ಮಾತ್ರ ತೆರೆಯಲಾಗಿತ್ತು. ಇನ್ನುಳಿದ 5 ಕ್ಯಾಂಟೀನ್‌ಗಳಿಗೆ ಜಾಗ ಹುಡುಕೋದ್ರಲ್ಲೇ ಕಾಲ ತಳ್ಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ರು ರಾಜ್ಯದ ಕ್ರೀಡಾಪಟುಗಳಿಗೆ ಸಿಗ್ತಿಲ್ವಾ ಬೆಂಬಲ ?

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more