Hampi Utsav 2023: ಕಾರ್ಯಕ್ರಮ ಚಾಲನೆಗೆ ಕ್ಷಣಗಣನೆ, ಮಾತಂಗ ಪರ್ವತದ ಮಾದರಿಯಲ್ಲಿದೆ ಮುಖ್ಯ ವೇದಿಕೆ

Jan 27, 2023, 3:01 PM IST

ವಿಜಯನಗರ (ಜ.27): ಹಂಪಿ ಉತ್ಸವದ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಮಾತಂಗ ಪರ್ವತದ ಮಾದರಿಯಲ್ಲಿ ಹಂಪಿ ಉತ್ಸದ ಮುಖ್ಯ ವೇದಿಕೆ ಸಿದ್ಧವಾಗಿದೆ. ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಜೆ ಕಾರ್ಯಕ್ರಮಕ್ಕೆ ಚಾಲನೆ  ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸೋ ನಿರೀಕ್ಷೆ ಇದ್ದು, ನಾಲ್ಕು ವೇದಿಕೆಗಳನ್ನು  ವಿಜಯನಗರ ಜಿಲ್ಲಾಡಳಿತ ಸಿದ್ದಪಡಿಸಿದೆ. ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿ ಯಾದ ಬಳಿಕ ನಡೆಯುತ್ತಿರೋ ಮೊದಲ ಹಂಪಿ ಉತ್ಸವ ಇದಾಗಿದೆ. ಕಾರ್ಯಕ್ರಮಕ್ಕೆ ಬೇಕಾದ ಅಂತಿಮ ಹಂತದ ತಾಲೀಮು ಕೂಡ  ಕಲಾವಿದರಿಂದ ನಡೆಯುತ್ತಿದೆ.   ಮುಖ್ಯ ವೇದಿಕೆಯ ಬಳಿ ವಿಜಯನಗರ ಜಿಲ್ಲಾಡಳಿತ 60 ಸಾವಿರಷ್ಟು ಕುರ್ಚಿಗಳನ್ನು ಹಾಕಿದೆ.

Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

ಹಂಪಿ ಉತ್ಸವದಲ್ಲಿ ಮರಳು ಉತ್ಸವ ಗಮನ ಸೆಳೆಯುತ್ತಿದೆ. ಮರಳಿನಲ್ಲಿ ಮಾಡಿದ ಕಲಾಕೃತಿ ಗಳನ್ನು ನೋಡೋದೇ ಒಂದು ಆನಂದ. ಕಲ್ಲುಗಳಿಂದ ನಿರ್ಮಾಣವಾದ ಐತಿಹಾಸಿಕ ಹಂಪಿ ಒಂದೇಡೆಯಾದ್ರೇ‌‌. ಮರಳಿಂದ ಕೃತಕ ಹಂಪಿಯ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಓರಿಸ್ಸಾದಿಂದ ಬಂದ ಕಲಾವಿದರರಿಂದ ವಿಶೇಷ ಮರಳಿನ ಕಲಾಕೃತಿ ನಿರ್ಮಾಣ ಮಾಡಲಾಗಿದೆ.  ಯಂತ್ರೋದ್ದಾರ ಆಂಜನೇಯ, ಪುರಂದರ ದಾಸರ ಮೂರ್ತಿ, ಕಡಲೇ ಕಾಳು ಗಣಪ ಸೇರಿದಂತೆ ವಿವಿಧ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಅಪ್ಪು ಪುತ್ತಳಿ, ಜೊತೆಗೆ ಜಿ20 ಸ್ಮಾರಕ ಎಲ್ಲರ ಗಮನ ಸೆಳೆಯುತ್ತಿದೆ.