Nov 16, 2019, 12:31 PM IST
ತುಮಕೂರು(ನ.16): ನೃತ್ಯ ಮಾಡುತ್ತಾ ಪಾಠ ಹೇಳಿಕೊಟ್ಟ ಟೀಚರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಕುಣಿಯುತ್ತಲೇ ಪಾಠ ಹೇಳಿಕೊಟ್ಟ ಶಿಕ್ಷಕರಿಯ ಡಿಫರೆಂಟ್ ಸ್ಟೈಲ್‌ಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮೊದಲು ಟಿಕ್‌ಟಾಕ್, ಮತ್ತೆ ಬೇರೆ ಟಾಕ್! ಆಂಟಿಯ ಕರಾಮತ್ತಿಗೆ ಯುವಕ ಬರ್ಬಾದ್!
ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಿಂದ ನೃತ್ಯದ ಮೂಲಕ ಪಾಠ ಬೋಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿ ಹಾಗೂ ಮಕ್ಕಳ ನೃತ್ಯದ ದೃಶ್ಯ ವೈರಲ್ ಆಗಿದೆ. ಅಆಇಈ ಕನ್ನಡದ ಅಕ್ಷರ ಮಾಲೆ ಹಾಡಿಗೆ ನೃತ್ಯ ಮಾಡುತ್ತಾ ಶಿಕ್ಷಕಿ ಪಾಠ ಹೇಳಿಕೊಟ್ಟಿದ್ದಾರೆ. ಶಾಲೆ ಹಾಗೂ ಶಿಕ್ಷಕಿಯ ಹೆಸರು ಪ್ರಸ್ತಾಪಿಸದೆ ವಿಡಿಯೋ ವೈರಲ್ ಮಾಡಲಾಗಿದೆ.