Jun 3, 2021, 4:15 PM IST
ಬೆಂಗಳೂರು(ಜೂ. 03) ಕನ್ನಡಿಗರು ಒಂದಾಗಿ ತಮ್ಮ ಸ್ವಾಭಿಮಾನ ಏನು ಎಂಬುದನ್ನು ತೋರಿಸಿದ್ದಾರೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್, Ugliest language ಲಿಂಕ್ ತೆಗೆದು ಹಾಕಿದೆ.ಗೂಗಲ್ ಎಡವಟ್ಟಿನ ವಿಚಾರ ಟ್ರೆಂಡ್ ಆಗುತ್ತಿದ್ದಂತೆ ಜನರು ಹಾಗೆ ಸರ್ಚ್ ಮಾಡಲು ಆರಂಭಿಸಿದರು.
ಕನ್ನಡ ಭಾಷೆ ಕೊಳಕು ಎಂದಿದ್ದ ಗೂಗಲ್ ಗೆ ತಕ್ಕ ಶಾಸ್ತಿ
ಆದರೆ ಇದು ಸರಿ ಅಲ್ಲ ಹಾಗೆ ಮಾಡಬೇಡಿ. ನಮ್ಮ ಭಾಷೆ ಮೇಲಿನ ಅಭಿಮಾನ ತೋರ್ಪಡಿಸಲು Queen of all language ಅಂಥ ಸರ್ಚ್ ಮಾಡಿ ಕನ್ನಡ ಎಂದು ಬರೆಯಿರಿ..ಈ ವಿಚಾರ ಟ್ರೆಂಡ್ ಆಗಲಿ ಎಂದು ಕೇಳಿಕೊಳ್ಳಲಾಗಿತ್ತು. ಈಗ ಒಮ್ಮೆ ಗೂಗಲ್ ಹೋಗಿ Queen of all language ಅಂಥ ಸರ್ಚ್ ಮಾಡಿ ನೋಡಿ!