Aug 18, 2022, 10:14 AM IST
ಬೆಂಗಳೂರು(ಆ.18): ರಾಜ್ಯದಲ್ಲಿ ಕೊರೋನಾ ಬಳಿಕ ಮೊದಲ ಬಾರಿಗೆ ಗಣೇಶೋತ್ಸವದ ಆಚರಣೆಗೆ ಸಿದ್ದತೆ ನಡೆದಿದೆ. ಆದರೆ, ಗಣೇಶೋತ್ಸವ ಆಚರಣೆ ಕುರಿತು ಸರ್ಕಾರದಿಂದ ಇನ್ನೂ ಮಾರ್ಗಸೂಚಿ ಬಿಡುಗಡೆಯಾಗಿಲ್ಲ. ಸರ್ಕಾರದ ನಡೆಗೆ ಗಣೇಶೋತ್ಸವ ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದು ಎರಡು ವರ್ಷಗಳಿಂದ ಆಚರಣೆಯಾಗಿಲ್ಲ. ಈ ಹಿಂದೆ ಪ್ರತಿ ವಾರ್ಡ್‌ನಲ್ಲಿ 50 ಸಾವರ್ಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಬೆಂಗಳೂರಿನ ಮನೆಗಳಲ್ಲಿ 5 ಲಕ್ಷ ಗಣೇಶನ ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಸರ್ಕಾರದಿಂದ ಮಾತ್ರ ಇನ್ನೂ ಮಾರ್ಗಸೂಚಿ ಬಿಡುಗಡೆಯಾಗಿಲ್ಲ.