ಒಂದು ದಿನದ ಸಮಸ್ಯೆ ಅಲ್ಲ, ಇವರದ್ದು ನಿತ್ಯ ನರಕ: 6 ವರ್ಷವಾದ್ರೂ ಉದ್ಘಾಟನೆಯಾಗದ ಶೌಚಾಲಯ

Sep 12, 2023, 1:17 PM IST

ಕಾಲಲ್ಲಿ ರಾಡ್ ಇದೆ ಆದ್ರೂ ಹಳ್ಳದಾಟಿಯೇ ಶೌಚ್ಯಕ್ಕೆ ಹೋಗ್ಬೇಕು. ಇಳಿ ವಯಸ್ಸಲ್ಲಿ ಮನೆ ಮೆಟ್ಟಿಲು ಹ ತ್ತೋದೇ ಕಷ್ಟ. ಆದ್ರೂ, ಶೌಚಕ್ಕೆ  ತಗ್ಗು ದಿನ್ನೆ ಹತ್ಬೇಕು. ಇದು ಒಂದು ದಿನದ ಸಮಸ್ಯೆ ಅಲ್ಲ. ಇವ್ರದ್ದು ನಿತ್ಯ ನರಕ. ಬಡಾವಣೆಗೆ ಸರಿಯಾದ ವಿದ್ಯುತ್ ಲೈಟ್‌ಗಳೂ (Lights) ಇಲ್ಲ. ಹೀಗಾಗಿ ರಾತ್ರಿ ಹೊತ್ತು ಶೌಚ್ಯಕ್ಕೆ ಹೋಗ್ಬೇಕೆಂದ್ರೆ ಕತ್ತಲೆಯಲ್ಲಿ ಟಾರ್ಚ್ ಹಿಡ್ಕೊಂಡು ಹೋಗ್ಬೇಕು. ಮನೆ ಎದ್ರು ಇರೋ ಶೌಚಾಲಯಕ್ಕೆ(Toilet) ಕನೆಕ್ಷನ್ ಇಲ್ಲ. ಹೀಗಾಗಿ ನಿತ್ಯ ನರಕದಲ್ಲೇ ಬಡಾವಣೆ ಜನ ಜೀವನ ಸಾಗಿಸ್ತಿದ್ದಾರೆ. ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ಗದಗ(Gadag) ನಗರದ ಹೊರ ವಲಯದ ಗಂಗಿಮಡಿ ಗಂಗಾನಗರ ಬಡಾವಣೆಯ ಬಯಲು ಶೌಚದ ಸಮಸ್ಯೆ ಹೇಳ ತೀರದು. ಮಳೆ ಇರ್ಲಿ, ರಾತ್ರಿಯಾಗಿರ್ಲಿ ಮಹಿಳೆಯರು ಹಳ್ಳ ದಾಟಿ ಬಯ ಲಿಗೆ ಶೌಚಕ್ಕೆ ಹೋಗ್ಬೇಕು.. ಮಳೆ ಅಬ್ಬರಿಸಿದ್ರೆ ಹಳ್ಳ ತುಂಬುತ್ತೆ.. ಹಳ್ಳ ಕಟ್ಕೊಂಡ್ರೆ ರಸ್ತೆ ಬ್ಲಾಕ್. 

ಬಡಾವಣೆಯ ಫಸ್ಟ್ ಕ್ರಾಸ್ ನಲ್ಲಿ 50 ಕ್ಕೂ ಹೆಚ್ಚು ಮನೆ ಇವೆ. ನೂರಾರು ಜನರು ವಾಸಿಸುತ್ತಾರೆ. ಅವ್ರೆಲ್ಲರಿಗೂ ಹಳ್ಳದ ಆಚಾಯ ಖಾಲಿ ಜಾಗೆಯೇ ಶೌಚಾಲಯ. ನಗರದ ಹೊರವಲಯದಲ್ಲಿರೋ ಗಂಗಿಮಡಿ ಗಂಗಾನಗರ ಬಡಾವಣೆಯಲ್ಲಿ ಪುಂಡರ ಕಾಟವೂ ಜಾಸ್ತಿ. ಶೌಚಕ್ಕೆ ಅಂತಾ ಬಯಲಿಗೆ ಹೋಗೋ ಮಹಿಳೆಯರ ಬಳಿ ಮೊಬೈಲ್ ಕಿತ್ತುಕೊಳ್ಳೋ ಪ್ರಕರಣವೂ ನಡೆದಿವೆಂತೆ. ಬಡಾವಣೆಯ ಹಿರಿಯ ಅಜ್ಜಿಯೊಬ್ಬರಿಗೆ ಕಾಲಿನಲ್ಲಿ ರಾಡ್ ಹಾಕಿದೆ. ಕಾಲು ನೋವಿದ್ರೂ ಹಳ್ಳದ ದಾಟಿ ಬಹಿರ್ದೆಸೆಗೆ ಹೋಗ್ಬೇಕು. 

ಮನೆಗೊಂದು ಶೌಚಾಲಯ ಅನ್ನೋ ಯೋಜನೆಯಡಿ ಮನೆಗೊಂದು ಶೌಚಾಲಯ ನಿರ್ಮಿಸಲಾಗಿದೆ. ಆದ್ರೆ, ಶೌಚಾಲಯಕ್ಕೆ ಪೈಪ್ ಕನೆಕ್ಷನ್ ಕೊಟ್ಟಿಲ್ಲ. ಹೀಗಾಗಿ ಟಾಯ್ಲೆಟ್ ಗಳು ಇದ್ದೂ ಇಲ್ಲವಾಗಿದೆ. ಗದಗ ಬೆಟಗೇರಿ ನಗರಸಭೆ 2017 ರಲ್ಲೇ ಬಡಾವಣೆಯಲ್ಲಿ ಪಬ್ಲಿಕ್ ಟಾಯ್ಲೆಟ್ ನಿರ್ಮಿಸಿದೆ. ಕಟ್ಟಡ ರೆಡಿ ಇದೆ..  ಕಟ್ಟಡಕ್ಕೆ ಬೋರ್  ವೆಲ್ ವ್ಯವಸ್ಥೆಯೂ ಇದೆ. ಆದ್ರೆ, ಆರು ವರ್ಷವಾದ್ರೂ ಸಾರ್ವಜನಿಕ ಶೌಚಾಲಯ ಉದ್ಘಾ ನೆಯಾಗಿಲ್ಲ. ನಗರಸಭೆ ಅಧಿಕಾರಿಗಳನ್ನ ಕೇಳಿದ್ರೆ ನೀರಿಟ್ಯಾಂಕ್ ಅಳವಡಿಸ್ಬೇಕು, ಮಾಡ್ತೀವಿ. ನೋಡ್ತೀವಿ ಅಂತಾ ಹಾರಿಕೆ ಉತ್ತರ ಕೊಡ್ತಿದ್ದಾರಂತೆ. ಸ್ವಚ್ಛ ಭಾರತ ಯೋಜನೆಯಡಿ ನಿರ್ಮಾಣವಾಗಿರೋ ಟಾಯ್ಲೆಟ್ ಇದ್ರೂ ಪಕ್ಕದಲ್ಲೇ ಬಯಲು ಬಹಿರ್ದೆಸೆಗೆ ಹೋಗೋ ಪರಿಸ್ಥಿತಿ.

ಇದನ್ನೂ ವೀಕ್ಷಿಸಿ:  ವಿಷ ಕೇಳಿದ ಕುಟುಂಬಕ್ಕೆ ಅಮೃತ ಕೊಡಿಸಿದ ಬಿಗ್ -3: 8 ವರ್ಷಗಳಿಂದ ಆಗದ್ದು ಕೇವಲ 4 ದಿನದಲ್ಲಿ ಆಯ್ತು !