Nov 24, 2021, 10:20 AM IST
ಉಡುಪಿ(ನ.24): ಮೀನು(Fish) ಪ್ರಿಯರ ಬಾಯಲ್ಲಿ ನೀರೂರುವ ಸುದ್ದಿ ಇದು. ಮಲ್ಪೆಯಲ್ಲಿ ಸಿಕ್ಕ ಈ ಮೀನಿನ ದರ ಕೇಳಿದ್ರೆ ನೀವು ಶಾಕ್ ಆಗ್ತೀರಾ! ಒಂದು ಮೀನಿನ ದರ ಲಕ್ಷ ರುಪಾಯಿ ದಾಟಿದೆ. ಏನಪ್ಪಾ ಇದರ ವಿಶೇಷತೆ ? ಇದಕ್ಕೆ ಇಷ್ಟೊಂದು ದುಬಾರಿ ಬೆಲೆ ಯಾಕೆ ? 20 ಕೆಜಿ ಮೀನಿನಲ್ಲಿ ಅಷ್ಟು ಬೆಲೆಬಾಳುವಂಥದ್ದೇನಿದೆ ಎಂಬೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹರಾಜಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟವಾದ ಗೋಳಿಮೀನು(Golimeenu) ಭಾರೀ ದುಬಾರಿ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಸಿಗೋ ಮೀನು ಮೀನುಗಾರರಿಗೆ ಸಮುದ್ರದಲ್ಲಿ ಸಿಗುವ ಅಪರೂಪದ ಮೀನು. ಅಪರೂಪಕ್ಕಾದರೂ ಸರಿ. ಈ ಮೀನೇನಾದರೂ ಬಲೆಗೆ ಬಿದ್ರೆ ದೊಡ್ಡ ಲಾಭ ತಂದುಕೊಡುತ್ತೆ. ಆ ದಿನ ಮೀನುಗಾರರ ಅದೃಷ್ಟ.
ಮಲ್ಪೆಯಲ್ಲಿ ಅಪರೂಪದ 84 ಕೆಜಿ ಹೆಲಿಕಾಫ್ಟರ್ ಫಿಶ್ ಬಲೆಗೆ!
ಶಾಮ್ ರಾಜ್ ತೊಟ್ಟಂ ರವರ ಬಲರಾಂಗೆ ಈ ಮೀನು ಸಿಕ್ಕಿಬಿದ್ದಿದೆ. ಹರಾಜಿನಲ್ಲಿ ಈ ಮೀನು 1,30,600 ರೂಪಾಯಿಗೆ ಮಾರಾಟವಾಗಿದೆ.
ಹರಾಜು ನಡೆದಾಗ ಪ್ರತಿ ಕೆಜಿಗೆ 9,060 ರಂತೆ ಮಾರಾಟವಾಗಿತ್ತು. ಈ ಮೀನು ಒಟ್ಟು 18 ಕೆಜಿ ತೂಕವಿತ್ತು.