ಮಂಡ್ಯ ಡಿಸಿ ಕಚೇರಿ ಎದುರು ರೈತ ಸಂಘಗಳ ಹೈಡ್ರಾಮಾ: ತಾರಕಕ್ಕೇರಿದ ಜಗಳ...!

ಮಂಡ್ಯ ಡಿಸಿ ಕಚೇರಿ ಎದುರು ರೈತ ಸಂಘಗಳ ಹೈಡ್ರಾಮಾ: ತಾರಕಕ್ಕೇರಿದ ಜಗಳ...!

Published : Dec 06, 2023, 10:37 AM IST

ರೈತರ ಸಮಸ್ಯೆಗಳನ್ನು ಹೊತ್ತು ಡಿಸಿ ಭೇಟಿಗೆ ತೆರಳಿದ್ದ ರೈತ ಸಂಘದ 2 ಬಣಗಳು ತಮ್ಮ ಮೂಲ ಉದ್ದೇಶ ಮರೆತು ಕಿತ್ತಾಡಿಕೊಂಡಿದ್ದು ಮುಜುಗರ ಉಂಟುಮಾಡಿದೆ.

ಮಂಡ್ಯ(ಡಿ.06):  ಮಂಡ್ಯದ ಡಿಸಿ ಕಚೇರಿ ಆವರಣದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ರಾಜ್ಯ ರೈತ ಸಂಘದ ಎರಡು ಬಣಗಳ ನಡುವೆ ಗಲಾಟೆ ನಡೆದಿದ್ದು, ದೂರು ಪ್ರತಿದೂರು ದಾಖಲಾಗಿದೆ. ಮಂಡ್ಯ ಡಿಸಿ ಆಫೀಸ್ ಆವರಣ ರಣರಂಗವಾಗಿತ್ತು. ಒಗ್ಗಟ್ಟಿನಿಂದ ಹೋರಾಡಬೇಕಿದ್ದ ರೈತ ಸಂಘಟನೆಗಳೇ ಪರಸ್ಪರ ಕಿತ್ತಾಡಿಕೊಂಡಿದ್ರು. ಡಿಸಿಗೆ ಮನವಿ ಸಲ್ಲಿಸಲು ಬಂದಿದ್ದ ವೇಳೆ 2 ಬಣಗಳ ರೈತ ಮುಖಂಡರು ಜಗಳ ಶುರು ಮಾಡಿದ್ರು. 

ಸಾಲ ವಸೂಲಿ ವೇಳೆ ಬ್ಯಾಂಕ್ ರೈತರಿಗೆ ಕಿರುಕುಳ ನೀಡ್ತಿದೆ ಅಂತ ರೈತ ಸಂಘಗಳು ಆಕ್ರೋಶ ವ್ಯಕ್ತಪಡಿಸ್ತಿವೆ. ಬ್ಯಾಂಕ್ಗಳ ನಡೆ ವಿರೋಧಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬ್ಯಾಂಕ್ ಆಫ್ ಬರೋಡಾ ಎದುರು ಪ್ರತಿಭಟಿಸಿದ್ರು. ಬಳಿಕ ಡಿಸಿಗೆ ಮನವಿ ಸಲ್ಲಿಸಲು ತೆರಳಿದ್ರು. ಅದೇ ಸಮಯಕ್ಕೆ ರೈತ ಬಣದ ಅಧ್ಯಕ್ಷ ಇಂಗಲಕುಪ್ಪೆ ಕೃಷ್ಣ ಮುಖಾಮುಖಿಯಾದ್ರು. ಮೊದಲಿಂದಲೂ ರೈತ ಸಂಘ ವಿರೋಧಿಸಿ, ಅಸಮಾಧಾನಕ್ಕೆ ಗುರಿಯಾಗಿದ್ದ ಕೃಷ್ಣ ಬಣ ನೋಡ್ತಿದ್ದಂತೆ, ಉನ್ನೊಂದು ಬಣದ ಕಾರ್ಯಕರ್ತರು ಸಿಡಿಮಿಡಿಗೊಂಡರು. ಬಡಗಲಪುರ ನಾಗೇಂದ್ರ ಮೇಲೆ ಕೃಷ್ಣ ಬೆಂಬಲಿಗರು ಹಲ್ಲೆ ನಡೆಸಿ, ಕಾರು ಹತ್ತಿಸಲು ಪ್ರಯತ್ನಿಸಿದ್ರು. 

ಭಾರತ್ ಜೋಡೋ ಮಾಡಿದ ಕಾಂಗ್ರೆಸ್‌ನಿಂದಲೇ ಇದೀಗ ಉತ್ತರ-ದಕ್ಷಿಣ ವಿಭಜನೆ ಕಿಡಿ!

ಕೂಡಲೇ ಬಡಗಲಪುರ ನಾಗೇಂದ್ರ ಪರ ಕಾರ್ಯಕರ್ತರು ಕೃಷ್ಣರನ್ನು ಬಂಧಿಸಬೇಕು ಅಂತ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು. ಕೃಷ್ಣ ರೈತ ಸಂಘದ ಹೆಸರಿನಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆ. ಕಾರಿಗೆ ಅಕ್ರಮವಾಗಿ ನಾಮಫಲಕ ಹಾಗೂ ಹಸಿರು ದೀಪ ಹಾಕಿಕೊಂಡಿದ್ದು ಕಾರನ್ನು ವಶಕ್ಕೆ ಪಡೆಯಬೇಕು ಅಂತ ಒತ್ತಾಯಿಸಿದರು. ಕೃಷ್ಣ ನಮ್ಮ ಮೇಲೆ ಬೇಕಂತಲೇ ದೂರು ನೀಡಿದ್ದಾರೆ, ನನ್ನ ಕೊಲೆಗೆ ಯತ್ನಿಸಿದ್ದಾರೆ ಅಂತ ಬಡಗಲಪುರ ನಾಗೇಂದ್ರ ಆಕ್ರೋಶ ಹೊರಹಾಕಿದ್ದಾರೆ. 

ರಸ್ತೆ ದುರಸ್ತಿ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ನೀಡಲು ಹೋಗಿದ್ವಿ. ಆಗ ನಾಗೇಂದ್ರ ಬೆಂಬಲಿಗರು ಇಲ್ಲಸಲ್ಲದ ಹೇಳಿಕೆ ನೀಡುತ್ತೀಯ ಅಂತ ನನ್ನ ಬೆದರಿಸಿದ್ರು. ನನ್ನ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದರು ಅಂತ ಕೃಷ್ಣ ಕಿಡಿಕಾರಿದ್ದಾರೆ.  ರೈತರ ಸಮಸ್ಯೆಗಳನ್ನು ಹೊತ್ತು ಡಿಸಿ ಭೇಟಿಗೆ ತೆರಳಿದ್ದ ರೈತ ಸಂಘದ 2 ಬಣಗಳು ತಮ್ಮ ಮೂಲ ಉದ್ದೇಶ ಮರೆತು ಕಿತ್ತಾಡಿಕೊಂಡಿದ್ದು ಮುಜುಗರ ಉಂಟುಮಾಡಿದೆ.
 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more