2 ಲಕ್ಷದ ಶ್ರೀಗಂಧ ಮರಕ್ಕೆ ಹೈವೆ ಅಧಿಕಾರಿಗಳು ಕೊಡೋದು 1 ಸಾವಿರ: ಸಂಕಷ್ಟದಲ್ಲಿ ಅನ್ನದಾತ

2 ಲಕ್ಷದ ಶ್ರೀಗಂಧ ಮರಕ್ಕೆ ಹೈವೆ ಅಧಿಕಾರಿಗಳು ಕೊಡೋದು 1 ಸಾವಿರ: ಸಂಕಷ್ಟದಲ್ಲಿ ಅನ್ನದಾತ

Published : Mar 24, 2022, 12:29 PM IST

*  ಶ್ರೀಗಂಧ ಬೆಳೆದ ಜಮೀನು ಸ್ವಾಧೀನಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
*  ರೈತರಿಗೆ ಮಾರುಕಟ್ಟೆ ಬೆಲೆ ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು
*  ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶವಿದ್ದರೂ ಡೋಂಟ್‌ ಕೇರ್ 
 

ಚಿಕ್ಕಮಗಳೂರು(ಮಾ.24):  ಮೊದಲು ಅಧಿಕಾರಿಗಳು ಬಂದು ಜಾಗ ಬಿಡಿ ಅಂದ್ರು.. ಇಲ್ಲಾ ನಾವು ಶ್ರೀಗಂಧ ಬೆಳೆದಿದ್ದೀವಿ, ಬದುಕೇ ಇಲ್ಲಿ ಕಟ್ಟಿಕೊಂಡಿದ್ದೀವಿ ಹೇಗೆ ಬಿಡೋದು ಅಂತಾ ರೈತರು ಕೇಳಿದ್ರು. ಅಯ್ಯೋ, ಡೋಂಟ್ ವರಿ ಒಳ್ಳೇ ಪರಿಹಾರ ಕೊಡ್ತೀವಿ ಜಾಗ ಬಿಡ್ಬೇಕು ನೋ ದೂಸ್ರಾ ಮಾತು ಅಂತಾ ಆ ಕಡೆಯಿಂದ ರಿಪ್ಲೈ ಬಂತು. ಸರಿ, ಜಾಗ ಬಿಡ್ತೀವಿ ಅಂತಾ ರೈತರು ರೆಡಿಯಾದ್ರು. ಆದರೆ ಇದೀಗ ಕೋರ್ಟ್ ಆದೇಶ ಇದ್ರೂ ಪರಿಹಾರ ನೀಡದೇ ಇರುವ ಅಧಿಕಾರಿಗಳು ಕ್ರಮ ಖಂಡಿಸಿ ರೈತರು ಕುಟುಂಬದೊಂದಿಗೆ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ 

ಸೊಗಸಾಗಿ ಬೆಳೆದಿರೋ ಈ ಶ್ರೀಗಂಧದ ವನವನ್ನ ನೋಡಿದ್ರೆ, ನಾವಿರುವ ತಾಣವೇ ಗಂಧದ ಗುಡಿ.. ಚಂದದ ಗುಡಿ.. ಶ್ರೀಗಂಧದ ಗುಡಿ.. ಅನ್ನೋ ಕನ್ನಡದ ಕಣ್ಮಣಿ ಡಾ.ರಾಜ್ ಸಾಂಗ್ ನೆನಪಾಗದೇ ಇರದು..! ಆದ್ರೆ ಈ ರೈತರಿಗೆ, ತಾವು ಬೆಳೆದ ಶ್ರೀಗಂಧದ ಮರಗಳ ಬಳಿಯೇ ಕುಳಿತುಕೊಂಡು ಸರ್ಕಾರ, ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸುವ ಸ್ಥಿತಿ ಬಂದಿದೆ. ಕೋರ್ಟ್‌ನ ಪರಿಹಾರದ ಆದೇಶ ಇಟ್ಕೊಂಡ್ ತೋರಿಸೋ ಜರೂರತ್ತು ಎದುರಾಗಿದೆ. ದೇವ್ರು ಕೊಟ್ರೂ ಪೂಜಾರಿ ಕೊಡ್ತಿಲಲ್ವಾ ಅನ್ನೋ ಆತಂಕ ಶುರುವಾಗಿದೆ. ಹೌದು, ಅಂದಾಗೆ ಹೀಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಹಳಿಯೂರು ಗ್ರಾಮದವರು. ಈ ಗ್ರಾಮದ 22 ಮಂದಿ ರೈತರು 8 ವರ್ಷದಿಂದ ಇಲ್ಲಿ ಭೂಮಿ ತೆಗೆದುಕೊಂಡು ಶ್ರೀಗಂಧ ಬೆಳೆದಿದ್ರು. ಆದ್ರೆ ಇದೀಗ ತರೀಕೆರೆ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯನ್ನ ನಿರ್ಮಿಸಲು ಇವುಗಳಿಗೆ ಕೊಡಲಿ ಪೆಟ್ಟು ಬೀಳೋ ಸಮಯ ಸನ್ನಿಹಿತವಾಗಿದೆ. ಆರು ವರ್ಷದ ಹಿಂದೆಯೇ ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವ್ರು ನೋಟಿಫಿಕೇಶನ್ ಮಾಡಿದ್ದಾರೆ. ಈ ವೇಳೆ ಕೇವಲ ಭೂಮಿಗೆ ಮಾತ್ರ ಅತಿ ಕಡಿಮೆ ಬೆಲೆ ಕಟ್ಟಿ ಪರಿಹಾರ ನೀಡಿದ್ದಾರೆ. ಆದ್ರೆ ಅದೇ ಭೂಮಿಯಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳಿಗೆ ಪರಿಹಾರದ ಹಣ ನೀಡಲು ಪ್ರಾಧಿಕಾರ ಮೀನಾಮೇಷ ಎಣಿಸುತ್ತಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. 

ಗೋಮಾಂಸ ಸಾಗಣೆ: ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ಮೊದಲು ಶ್ರೀಗಂಧದ ಬೆಳೆಗೆ ಬೆಲೆ ಫಿಕ್ಸ್ ಮಾಡಲು ಹಾವು ಏಣಿ ಆಟವನ್ನ ಪ್ರಾಧಿಕಾರ ಮಾಡ್ತು. ಸರ್ಕಾರಿ, ಖಾಸಗಿ ಏಜೆನ್ಸಿ ಅಂತಾ ವರ್ಷಗಟ್ಟಲ್ಲೇ ಸಮಯ ದೂಡುತ್ತಲೇ ಬಂತು. ಕೊನೆಗೆ ಶ್ರೀಗಂಧ ಮರದ 30 ವರ್ಷದ ಜೀವಿತಾವಧಿಯನ್ನ ಗಮನದಲ್ಲಿಟ್ಟುಕೊಂಡು ಒಂದು ಮರಕ್ಕೆ 2 ಲಕ್ಷದ 44 ಸಾವಿರ ರೂಪಾಯಿಯನ್ನ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಆದರೂ ಅರಣ್ಯ ಇಲಾಖೆ ದಿನಕ್ಕೊಂದು ವರದಿ ತಯಾರಿಸುತ್ತಾ ಶ್ರೀಗಂಧ ಬೆಳೆದ ರೈತರಿಗೆ ಯಾಮಾರಿಸುತ್ತಲೇ ಬರುತ್ತಿದೆ. ಹತ್ತು ವರ್ಷದ ಒಂದು ಮರಕ್ಕೆ ಕೇವಲ 1176 ರೂಪಾಯಿ ನೀಡುವುದಾಗಿ ಹೇಳಿದೆ. ಎಲ್ಲಿಯ 2 ಲಕ್ಷ, ಎಲ್ಲಿಯ 1 ಸಾವಿರ..? ಇವ್ರು ಕೊಡುವ ಪರಿಹಾರ ವಿಷವನ್ನ ಖರೀದಿ ಮಾಡಲು ಕೂಡ ಸಾಕಾಗುವುದಿಲ್ಲ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ಆದೇಶ ಮಾಡಿದ್ರೂ ರೈತರನ್ನ ಸತಾಯಿಸುತ್ತಿರೋ ಅಧಿಕಾರಿಗಳ ನಡೆ ಪ್ರಶ್ನಿಸಿ ರೈತರು ಕುಟುಂಬ ಸದಸ್ಯರೊಂದಿಗೆ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 

ಒಟ್ಟಾರೆ ದೇವ್ರು ಕೊಟ್ರೂ ಪೂಜಾರಿ ಕೊಡದ ಪರಿಸ್ಥಿತಿ ಈ ರೈತರದ್ದಾಗಿದ್ದು ಇದರಿಂದ ನ್ಯಾಯಾಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೂ ರೈತರ ಸಮಸ್ಯೆ ಕೇಳಲು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದೆ ಬಾರದೇ ಇರುವುದು ವಿಷರ್ಯಾಸವೇ ಸರಿ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಮುಖಹಾಕಬೇಕಾಗಿದೆ.
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more