ಬೀದರ್‌: ಬರ, ಲೋಡ್‌ ಶೆಡ್ಡಿಂಗ್ ನಡುವೆ ರೈತರಿಗೆ ವಿಚಿತ್ರ ಜಾತಿಯ ಕೀಟಗಳ ಕಾಟ!

Oct 22, 2023, 10:45 PM IST

ಬೀದರ್‌(ಅ.22): ಗಡಿ ಜಿಲ್ಲೆಯಲ್ಲಿ ಮಳೆ ಬಾರದೆ ಅನ್ನದಾತರು ಕಂಗಾಲಾಗಿ ಹೋಗಿದ್ದಾರೆ. ಇದರ ಮಧ್ಯೆ ರೈತರಿಗೆ ಮತ್ತೊಂದು ಟೆನ್ಷನ್‌ ಶುರುವಾಗಿದೆ. ವಿಚಿತ್ರ ಜಾತಿಯ ಕೀಟಗಳು ಬೆಳೆಗಳನ್ನ ನಾಶಪಡಿಸುತ್ತಿವೆ. ಇದರಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ತೊಗರಿ ಬೆಳೆ ರೈತರಿಗೆ ವರದಾನವಾಗಿದೆ. ಕಡಿಮೆ ಮಳೆಯಲ್ಲೂ ಬೆಳೆದು ಉತ್ತಮ ಫಸಲು ನೀಡುತ್ತೆ. ಆದರೆ, ಈ ಬಾರಿ ತೊಗರಿಗೆ ವಿಚಿತ್ರ ಜಾತಿಯ ಕೀಟಗಳ ಕಾಟ ಶುರುವಾಗಿದೆ. ಔಷಧಿ ಸಿಂಪಡಿಸಿದ್ರೂ ಕೀಟಗಳು ಸಾಯುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಅನ್ನದಾತರು ಚಿಂತೆಗೀಡಾಗಿದ್ದಾರೆ.   

ಬರದ ಮಧ್ಯೆ ರೈತರಿಗೆ ಲೋನ್‌ ಬರೆ! ಧಾರವಾಡದ ರೈತರಿಗೆ ಬ್ಯಾಂಕ್‌ನಿಂದ ಹರಾಜು ನೋಟಿಸ್