BIG 3: ಗದಗ ತರಕಾರಿ ಮಾರುಕಟ್ಟೆಯಲ್ಲಿ 'ಕತ್ತಲೆ'ಯಲ್ಲೇ ರೈತರ ವ್ಯಾಪಾರ

Jan 18, 2023, 3:50 PM IST

ಗದಗ ನಗರದಲ್ಲಿ ನಿತ್ಯ ಬರೋಬ್ಬರಿ 40 ತರಕಾರಿ ಮಳಿಗೆಗಳ ವ್ಯಾಪಾರಸ್ಥರು ಸಂಜೆ ಕತ್ತಲಲ್ಲಿ ವ್ಯಾಪಾರ ಮಾಡ್ತಾರೆ. ಶಾಸಕರು, ಜಿಲ್ಲಾಧಿಕಾರಿಗಳು, ಕಮಿಷನರ್ ಸಾಹೇಬರಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಗ್ರೇನ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡೋ ತರಕಾರಿ ವ್ಯಾಪಾರಸ್ಥರಿಗೆ ಅನುಕೂಲವಾಗ್ಲಿ, ಮಳೆಗಾಳಿಯಿಂದ ರಕ್ಷಣೆ ನೀಡ್ಲೆ ಅನ್ನೋ ಉದ್ದೇಶಕ್ಕೆ ಶೆಡ್ ನಿರ್ಮಾಣ ಮಾಡಲಾಗಿದೆ. ನಗರಸಭೆ ಜನರಲ್ ಫಂಡ್'ನ 20 ಲಕ್ಷ ರೂ. ವ್ಯಯಿಸಿ 2021ರಲ್ಲಿ‌ ಕಾಮಗಾರಿ ಆರಂಭಿಸಿ ಕಳೆದ ಏಳು ತಿಂಗಳ ಹಿಂದೆ ಶೆಡ್ ನಿರ್ಮಾಣ ಮಾಡಿದ್ರು. ಶೆಡ್'ಗೆ ಕರೆಂಟ್ ತಾಗಿ ಅನಾಹುತ ಆಗದಿರಲಿ ಎಂದು ಎಲೆಕ್ಟ್ರಿಕ್ ಕನೆಕ್ಷನ್ ತಪ್ಪಿಸಲಾಗಿದೆ. ಗ್ರೇನ್ ಮಾರ್ಕೆಟ್'ನ ಒಂದು ಭಾಗಕ್ಕೆ ಪವರ್ ಕನೆಕ್ಷನ್ ಇದೆ. ಅಲ್ಲಿ ಸರಿಯಾಗಿ ಬೆಳಕಿನ ವ್ಯವಸ್ಥೆ ಇದೆ. ಆದರೆ 40 ಕ್ಕೂ ಹೆಚ್ಚು ವ್ಯಾಪಾರಸ್ಥರು ಕೂರುವ ಮತ್ತೊಂದು ಭಾಗಕ್ಕೆ ಕರೆಂಟ್ ಇಲ್ಲ. ಹೀಗಾಗಿ ಈ ಭಾಗಕ್ಕೆ ಜನ ಕಾಲಿಡೋದಕ್ಕೂ ಭಯ ಪಡ್ತಾರೆ. ಕೆಲಸ ಮುಗಿಸಿ ಮನೆಗೆ ಹೋಗುವಾಗ ಬಹುತೇಕರು ತರಕಾರಿ ಖರೀದಿಸ್ತಾರೆ. ಸರಿಯಾದ ಬೆಳಕು ಇಲ್ದಿದ್ರೆ ವ್ಯಾಪಾರ ಆಗೋದಾದ್ರೂ ಹೇಗೆ ಅಂತಾರೆ ತರಕಾರಿ ವ್ಯಾಪಾರಸ್ಥರು. ಈ ಸಮಸ್ಯೆಯನ್ನು ಬಗೆಹರಿಸೋ ನಿಟ್ಟಿನಲ್ಲಿ ನಗರಸಭೆ ಕ್ರಮ ತೆಗೆದುಕೊಳ್ಳಬೇಕಿದೆ.

ವಿಧಾನಸಭೆ ಜೊತೆ ಕೇಂದ್ರದಲ್ಲಿ ಹ್ಯಾಟ್ರಿಕ್‌ ಗೆಲುವಿಗೆ ಪ್ಲಾನ್‌: ಹೈಕಮಾಂಡ್ ಕೊಟ್ಟ ಟಾಸ್ಕ್ ಏನು?