Jan 18, 2022, 11:58 AM IST
ಕಾರವಾರ (ಜ. 18): ಶತ್ರುಗಳಿಂದ ದೇಶದ ರಕ್ಷಣೆ ಮಾಡುತ್ತಾ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಯೋಧರು (Soldier) ಗಡಿ ಭದ್ರತೆಯಲ್ಲೇ ಜೀವನ ಕಳೆಯುತ್ತಾರೆ. ದೇಶಕ್ಕೆ ತಮ್ಮ ಕೊಡುಗೆ ನೀಡಿ ನಿವೃತ್ತಿ ಪಡೆದ ಬಳಿಕ ಸ್ವಂತ ಮನೆಯಲ್ಲಿ ಕುಟುಂಬದೊಂದಿಗೆ ನೆಮ್ಮದಿಯ ಜೀವನ ಸಾಗಿಸಬೇಕೆನ್ನುವುದು ಯೋಧರು ಕನಸ್ಸು. ಆದರೆ ಉತ್ತರಕನ್ನಡ ಜಿಲ್ಲೆಯ ಮೂಲದ ನಿವೃತ್ತ ಯೋಧರ ಈ ಕನಸ್ಸು ಮಾತ್ರ ಕನಸಾಗಿಯೇ ಉಳಿಯುವಂತಾಗಿದೆ. ಜಿಲ್ಲೆಯ ಸುಮಾರು 50ಕ್ಕೂ ಅಧಿಕ ನಿವೃತ್ತ ಯೋಧರಿಗೆ ಈವರೆಗೂ ಜಿಲ್ಲಾಡಳಿತ ಭೂಮಿಯೇ ಮಂಜೂರು ಮಾಡಿಲ್ಲದ್ದರಿಂದ ಇಂದಿಗೂ ನಿವೃತ್ತ ಯೋಧರು ಭೂಮಿಗಾಗಿ ಅಲೆದಾಡುವಂತಾಗಿದೆ.
ಇದನ್ನೂ ಓದಿ: ದೇಶದ ಸೇನಾ ಪಡೆಗೆ ಶತ್ರು ‘ಕಣ್ತಪ್ಪಿಸುವಂಥ’ ನೂತನ ಸಮವಸ್ತ್ರ: 14 ವರ್ಷಗಳ ಬಳಿಕ ಬದಲಾವಣೆ!
ಕಾರವಾರ ತಾಲೂಕಿನ ಕೆರವಾಡಿ ಗ್ರಾಮದ ನಿವೃತ್ತ ಸೈನಿಕ ರಮೇಶ ನಾಯ್ಕ ಹಲವು ವರ್ಷಗಳಿಂದ ಸರಕಾರದ ಸವಲತ್ತಿಗಾಗಿ ಅಲೆದಾಡುತ್ತಿದ್ದಾರೆ. ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ಜೀವನಕ್ಕಾಗಿ ಬ್ಯಾಂಕ್‌ನಲ್ಲಿ ಸೆಕ್ಯೂರಿಟಿಗಾರ್ಡ್ ಕೆಲಸ ಮಾಡಿಕೊಂಡಿದ್ದರು. ಕೆರವಾಡಿ ಗ್ರಾಮದ ಅತಿಕ್ರಮಣ ಜಮೀನಿನಲ್ಲಿ ಮನೆಯೊಂದನ್ನು ಕಟ್ಟಿಕೊಂಡು ಅವರು ಜೀವನ ಸಾಗಿಸುತ್ತಿದ್ದರಾದ್ರೂ, ಕಳೆದ ಮಳೆಗಾಲದಲ್ಲಿ ಆ ಮನೆಯೂ ನೀರಿನಲ್ಲಿ ಮುಳುಗಿ ಹಾಳಾಗಿ ಹೋಗಿದೆ. ಇದರಿಂದಾಗಿ ಸದ್ಯಕ್ಕೆ ಯಾರದ್ದೋ ಬಾಡಿಗೆ ಮನೆಯಲ್ಲಿ ರಮೇಶ್ ನಾಯ್ಕ ನೆಲೆಸಿದ್ದಾರೆ ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.