ಹಾಸನ; ನಿಲ್ಲದ ಕಾಡಾನೆ ಹಾವಳಿ, ತಲೆ ಮೇಲೆ ಕೈಹೊತ್ತು ಕುಳಿತ ರೈತ

Sep 19, 2021, 11:46 PM IST

ಹಾಸನ(ಸೆ. 19) ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ  ಕಾಡಾನೆಗಳ ಹಾವಳಿ ಮುಂದುವರಿದಿದೆ. ಸಕಲೇಶಪುರ ತಾಲ್ಲೂಕಿನ ಉದೇವಾರದಲ್ಲಿ ಗಜಪಡೆ ದಾಂಧಲೆ ನಡೆಸಿದೆ.  ಕೃಷಿಕರು ಬೆಳೆದ ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತ ಬೆಳೆ ನಾಶವಾಗಿದೆ.

ರಸ್ತೆ ದಾಟಿ ಬಂದ 40 ಕ್ಕೂ ಹೆಚ್ಚು ಕಾಡಾನೆಗಳಿರುವ ದೊಡ್ಡ ಗಜಪಡೆ ಲೂಟಿ ಹೊಡೆದಿವೆ. ಹಿಂಡು ಹಿಂಡಾಗಿ ಕಾಫಿತೋಟ ಅಲೆಯುತ್ತಿರೋ  ಹಿಂಡು , ಓಡಾಟ ಮೊಬೈಲ್‌ನಲ್ಲಿ ಸೆರೆಯಾಗಿದೆ

ಮಾವುತನಿಗೆ ಕಣ್ಣೀರ ವಿದಾಯ ಹೇಳಿದ ಆನೆ

ತೋಟಗಳಲ್ಲಿ ಕೆಲಸ ಮಾಡಲಾಗದೆ ಬೆಳೆಗಾರರ ಸಂಕಷ್ಟ ಅನುಭವಿಸಬೇಕಾಗಿದೆ. ಕಾಡಾನೆ ಹಾವಳಿಯಿಂದ ಕಂಗಾಲಾದ ರೈತರು ಹಾಗೂ ಕಾಫಿ ತೋಟದ ಮಾಲೀಕರು. ಪ್ರತಿನಿತ್ಯ ಗ್ರಾಮಗಳ ಸಮೀಪವೇ ಓಡಾಡುತ್ತಿರುವ ಕಾಡಾನೆಗಳು; ಗ್ರಾಮದೊಳಗೆ ಎಂಟ್ರಿ ಕಾಡಾನೆಗಳ ಓಡಾಟದಿಂದ ಭಯಭೀತರಾಗಿರುವ ಗ್ರಾಮಸ್ಥರ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.