Jul 12, 2024, 4:42 PM IST
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ (Valmiki Development Corporation scam) ತನಿಖೆಯನ್ನು ಕೆಲ ದಿನಗಳಿಂದ ಎಸ್ಐಟಿ ನಡೆಸುತ್ತಿದೆ. ಇದರ ಬೆನ್ನಲೇ ಇಡಿ ಅಂದ್ರೆ ಜಾರಿ ನಿರ್ದೇಶನಾಲಯ(ED) ಈ ಕೇಸ್‌ನ ಪ್ರಮುಖ ಆರೋಪಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದೆ. ಈ ಇಡಿ ಟೀಮ್‌ನ ದಾಳಿ ತುಂಬಾ ನಿಗೂಢವಾಗಿರುತ್ತೆ ಮತ್ತು ಪಕ್ಕಾ ತಯಾರಿಯೊಂದಿಗೆ ದಾಳಿ ನಡೆಸುತ್ತೆ. ದಾಳಿ ಸಂದರ್ಭದಲ್ಲಿ ಕೆಲ ಪ್ರಮುಖರಿಗೆ ಬಿಟ್ಟರೆ ಇನ್ಯಾರಿಗೂ ಎಲ್ಲಿ ದಾಳಿ ಅನ್ನೋದು ಗೊತ್ತಿರೊದಿಲ್ಲ. ಇತ್ತೀಚೆಗೆ ಕೆಲ ದಿನಗಳಿಂದ ರಾಜ್ಯದಲ್ಲಿ ಬಹುಕೋಟಿ ಹಗರಣದ ಸುದ್ದಿಯೇ ಓಡುತ್ತಿದೆ. ಬರೋಬ್ಬರಿ 187 ಕೋಟಿ ರೂಪಾಯಿ ಹಗರಣವದು. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲದೇ ದುಡ್ಡು ಗುಳುಂ ಆಗಿರೋ ಹಗಣವಿದು. ಈ ಹಗರಣದ ತನಿಖೆಯನ್ನು ಎಸ್ಐಟಿ (SIT)ಕಳೆದ ಕೆಲ ದಿನಗಳಿಂದ ನಡೆಸುತ್ತಿದೆ. ಈ ಹಗರಣದಲ್ಲಿ ಆರೋಪ ಕೇಳಿ ಬಂದಿದ್ದರಿಂದ ಸಚಿವ ಬಿ.ನಾಗೇಂದ್ರ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಸ್ಐಟಿ ತಿನಿಖೆ ಎದುರಿಸುತ್ತಿರುವ ಬಿ. ನಾಗೇಂದ್ರ(B.Nagendra) ಮತ್ತು ಇತರೇ ಪ್ರಮುಖ ಆರೋಪಿಗಳ ಮನೆಗಳ ಮೇಲೆ ನಿನ್ನೆ ಇದ್ದಕ್ಕಿಂತೆ ಇಡಿ ದಾಳಿ ಮಾಡಿದೆ.
ಇದನ್ನೂ ವೀಕ್ಷಿಸಿ: ಅಂಬಾನಿ ಮನೆಯಲ್ಲಿ ವಿವಾಹ ವೈಭವ! ಅತಿಥಿಗಳ ಓಡಾಟಕ್ಕೆ 3 ಜೆಟ್.. 100 ಪ್ರೈವೇಟ್ ಪ್ಲೇನ್!