ಕೇರಳದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಸ್ಫೋಟಕ ಹೇಳಿಕೆ: ಪ್ರಾಣಿ ಬಲಿ ಕೊಟ್ಟು ಶತ್ರುಭೈರವಿ ಯಾಗದ ಬಗ್ಗೆ ತನಿಖೆ?

ಕೇರಳದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಸ್ಫೋಟಕ ಹೇಳಿಕೆ: ಪ್ರಾಣಿ ಬಲಿ ಕೊಟ್ಟು ಶತ್ರುಭೈರವಿ ಯಾಗದ ಬಗ್ಗೆ ತನಿಖೆ?

Published : Jun 01, 2024, 12:44 PM ISTUpdated : Jun 01, 2024, 12:45 PM IST

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ನನ್ನ ವಿರುದ್ಧ ಹಾಗೂ ನಮ್ಮ ಸರ್ಕಾರದ ವಿರುದ್ಧ ಕೇರಳದಲ್ಲಿ ಶತ್ರುಭೈರವಿ ಯಾಗ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಘಟನೆ ಸಂಬಂಧ ಕೇರಳ ಸರ್ಕಾರ  ಅಲರ್ಟ್‌ ಆಗಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಿದೆ. 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ (DK Shivakumar) ಅವರು ನನ್ನ ವಿರುದ್ಧ ಹಾಗೂ ನಮ್ಮ ಸರ್ಕಾರದ ವಿರುದ್ಧ ಕೇರಳದಲ್ಲಿ ಶತ್ರುಭೈರವಿ ಯಾಗ  (Shatrubhairavi Yaga) ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಘಟನೆ ಸಂಬಂಧ ಕೇರಳ ಸರ್ಕಾರ (Kerala Govt) ಅಲರ್ಟ್‌ ಆಗಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಿದೆ. ಕೇರಳ ರಾಜ್ಯ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ಮೂಲಕ ತನಿಖೆ ನಡೆಸಿದ್ದು, ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಭಾಗದಲ್ಲಿ ಮಾಹಿತಿ ಸಂಗ್ರಹ ಮಾಡಲಾಗಿದೆ. 

ಈ ನಡುವೆ ಪ್ರಾಣಿ ಬಲಿ ಕೊಟ್ಟು ಶತ್ರುಭೈರವಿ ಯಾಗ ನಡೆದಿದ್ಯಾ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಕೇರಳ ಡಿಜಿಪಿಗೆ ವಿಶೇಷ ತಂಡ ವರದಿ ಸಲ್ಲಿಸಿದೆ. ತಳಿಪರಂ ರಾಜರಾಜೇಶ್ವರಂ, ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ತನಿಖೆ ಮಾಡಲಾಗಿದ್ದು, ಯಾವುದೇ ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ಡಿಜಿಪಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ಅಲ್ಲದೆ ಕರ್ನಾಟಕ ಪೊಲೀಸ್ ವಿಶೇಷ ತಂಡದಿಂದಲೂ ಗುಪ್ತವಾಗಿ ಮಾಹಿತಿ ಸಂಗ್ರಹ ಮಾಡಲಾಗಿದೆ. ಆದರೆ, ಯಾರ ತನಿಖೆಯಲ್ಲೂ ಸಹ ಈ ವಿಷಯ ಕಂಡುಬಂದಿಲ್ಲ. 

ಈ ನಡುವೆ ಡಿಕೆಶಿ ಆರೋಪವನ್ನು ಕೇರಳ ದೇವಸ್ವಂ ಬೋರ್ಡ್ (Kerala Devaswam Board) ಸಚಿವ ರಾಧಾಕೃಷ್ಣನ್‌ ತಳ್ಳಿಹಾಕಿದ್ದಾರೆ.  ಕೇರಳದ ಯಾವುದೇ ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ನಡೆಯಲ್ಲ ಅಂತ ಸ್ಪಷ್ಟನೆ ಸಹ ನಿಡಿದ್ದಾರೆ. ಜೊತೆಗೆ ಡಿಕೆಶಿ ಆರೋಪವನ್ನು ತಳಿಪರಂ ಶ್ರೀರಾಜರಾಜೇಶ್ವರಂ ದೇಗುಲ ಅಲ್ಲಗೆಳೆದಿದೆ. ದೇವಸ್ವಂ ಬೋರ್ಡ್ ಅಧೀನದ ದೇಗುಲಗಳಲ್ಲಿ ಪ್ರಾಣಿ ಬಲಿ ಮಾಡಲ್ಲ, ಪ್ರಾಣಿ ಬಲಿ ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯ ಮಾಡಲ್ಲ ಎಂದು ತಿಳಿಸಲಾಗಿದೆ. 
 
ಇನ್ನು ಸಿಎಂ ಮತ್ತು ನನ್ನ ವಿರುದ್ಧ ಕೇರಳದಲ್ಲಿ ಶತ್ರುಭೈರವಿ ಯಾಗ ಮಾಡಲಾಗಿದೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗ ಎಂದಿದ್ದ ಡಿಕೆಶಿ ಯಾಗದಲ್ಲಿ ಮೇಕೆ, ಹಂದಿ, ಕುರಿ, ಬಲಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದರು.

ಇದನ್ನೂ ವೀಕ್ಷಿಸಿ;  Lok Sabha elections 2024: ಕ್ಲೈಮ್ಯಾಕ್ಸ್ ಹಂತ ತಲುಪಿದ ಲೋಕಸಭಾ ಮಹಾಸಮರ: ಇಂದೇ ಹೊರಬೀಳಲಿದೆ ಎಕ್ಸಿಟ್ ಪೋಲ್ ಭವಿಷ್ಯ!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!