Nov 13, 2023, 11:33 AM IST
ಬಣ್ಣ ಬಣ್ಣದ ಹಣತೆ. ಒಂದಕ್ಕಿಂತ ಒಂದು ಸುಂದರ..ಬೆಳಕಿನ ಹಬ್ಬದ ಸಂಭ್ರ ಇಮ್ಮಡಿ ಗೊಳಿಸುವ ಈ ಸ್ಪೆಷಲ್ ಹಣತೆಗಳಿಗೆ(Deepa) ಡಿಮ್ಯಾಂಡಪ್ಪೋ ಡಿಮ್ಯಾಂಡ್. ಮಾರುಕಟ್ಟೆಯಲ್ಲಿ ಸಿಗುವ ಇತರೆ ಹಣತೆಗಳಿಗಿಂತ ಈ ಹಣತೆಗಳು ಡಿಫರೆಂಟ್ ಆಗಿ ಕಾಣುತ್ತವೆ.. ಅಷ್ಟೇ ಅಲ್ಲ ಈ ಸ್ಪೆಷಲ್ ಹಣತೆ ಹಿಂದೆಯೂ ಒಂದು ವಿಶೇಷತೆ ಇದೆ.. ಹೀಗೆ ಬಣ್ಣ ಬಣ್ಣರ ರೂಪ ಪಡೆದ ಹಣತೆಗಳ ಹಿಂದಿರೋದಿ ವಿಶೇಷ ಚೇತನರು( Specialized Children). ಮಂಗಳೂರಿನ (Mangalore) ವಿಠೋಬ ಟೆಂಪಲ್ ರೋಡ್ನಲ್ಲಿರುವ ನವಚೇತನ ವಿಶೇಷ ಶಾಲೆಯ ಮಕ್ಕಳ ಕೈಯ್ಯಲ್ಲಿ ಮೂಡಿ ಬಂದ ಹಣತೆಗಳಿವು. ತಮ್ಮನ್ನು ತಾವೇ ನಿಭಾಯಿಸಲಾಗದ ವಿಶೇಷ ಚೇತನ ಮಕ್ಕಳು ಈ ಹಣತೆಗಳನ್ನು ತಯಾರಿಸಿದ್ದು ವಿಶೇಷ. ನವಚೇತನ ವಿಶೇಷ ಸ್ಕೂಲ್ನ ಮಕ್ಕಳಿಗೆ ಸುಮಾರು 20 ವರ್ಷಗಳಿಂದ ಇಂತಹ ಕರ ಕುಶಲ ತಯಾರಿಯ ತರಬೇತಿ ನೀಡಲಾಗುತ್ತಿದೆ. ಕೇವಲ ಹಣತೆ ಮಾತ್ರವಲ್ಲದೆ, ವೆಡ್ಡಿಂಗ್ ಕಾರ್ಡ್, ಸ್ವೀಟ್ ಬಾಕ್ಸ್, ಗಿಫ್ಟ್ ಬಾಕ್ಸ್ಗಳನ್ನೂ ತಯಾರಿಸೋದು ಗೊತ್ತು.ವಿಶೇಷ ಚೇತನ ಮಕ್ಕಳ ವಿಶೇಷ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಜನ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದು ಮಕ್ಕಳ ಕೌಶಲ್ಯಾಭಿವೃದ್ಧಿ ಜೊತೆಗೆ ಆರ್ಥಿಕ ಭದ್ರತೆಯನ್ನೂ ನೀಡುತ್ತಿದೆ. ಹಣತೆ ಇಲ್ಲದೆ ದೀಪಾವಳಿ ಹಬ್ಬ ಪೂರ್ಣವಾಗೋದಿಲ್ಲ.ಬೆಳಕಿನ ಹಬ್ಬವನ್ನು ಸಂಭ್ರಮಿಸಲು ಈ ವಿಶೇಷ ಚೇತನರ ಸ್ಪೆಷಲ್ ಹಣತೆಯನ್ನೇ ಖರೀದಿ ಮಾಡ್ತಿದ್ದಾರೆ. ಶಾಲೆಗೆ ಭೇಟಿ ನೀಡಿ ಕೆಲವರು ಹಣತೆ ಖರೀದಿ ಮಾಡಿದ್ರೆ, ಉಳಿದ ಹಣತೆಗಳನ್ನು ಮಾರುಕಟ್ಟೆಯಲ್ಲಿ ಮಾರಟಕ್ಕಿಡಲಾಗಿದೆ.
ಇದನ್ನೂ ವೀಕ್ಷಿಸಿ: ರಾಯಚೂರಲ್ಲಿ ಬಂಜಾರ ಸಮುದಾಯದ ದೀಪಾವಳಿ ಆಚರಣೆ ಸ್ಪೆಷಲ್: ಪೂಜೆ ಪುನಸ್ಕಾರ..ಮನೆಮನೆಗಳಲ್ಲೂ ಹಬ್ಬದ ಸಂಭ್ರಮ