ಬೇರೆ ಭತ್ತದ ತಳಿಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಹೆಚ್ಚು ಇಳುವರಿ ಬರುವ ಭತ್ತ ಇದಾಗಿದೆ. ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದು ಸಹ ಕರೆಯುತ್ತಾರೆ..
ಚಾಮರಾಜನಗರ (ಡಿ. 21): ಹೈದರಾಬಾದ್ ನಲ್ಲಿರುವ ಭಾರತೀಯ ಭತ್ತ ಸಂಶೋಧನ ಸಂಸ್ಥೆ ಅಭಿವೃದ್ಧಿಪಡಿಸಿರುವ ಮಧುಮೇಹಿಗಳ ಸ್ನೇಹಿ ( Dia Rice For Diabetic) ಎಂದೆ ಹೆಸರಾದ ಆರ್.ಎನ್.ಆರ್ ತಳಿಯ ಭತ್ತ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಂಪರ್ ಇಳುವರಿ ಬಂದಿದೆ. ಎಡಬಿಡದೆ ಸುರಿದ ಮಳೆ, ಸಾಮಾನ್ಯವಾಗಿ ಬಾಧಿಸುವ ಬೆಂಕಿ ರೋಗವನ್ನು ತಾಳಿಕೊಂಡು ಬೆಳದಿರುವ ಆರ್.ಎನ್.ಆರ್ ತಳಿ ಭತ್ತ ಉತ್ತಮವಾಗಿ ಬೆಳೆದು ರೈತರಲ್ಲಿ ಮಂದಹಾಸ ಮೂಡಿಸಿದೆ.
ಇದು ಸಕ್ಕರೆ ಅಂಶ ಕಡಿಮೆ ಇರುವ ಡಯಾಬಿಟಿಸ್ ರೋಗಿಗಳು ಉಪಯೋಗಿಸಬಹುದಾದ ಆರ್.ಎನ್.ಆರ್ ತಳಿಯ ಭತ್ತ. ಹೈದರಾಬಾದ್‌ನಲ್ಲಿರುವ ಭಾರತೀಯ ಭತ್ತ ಸಂಶೋಧನ ಸಂಸ್ಥೆ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಬೆಂಕಿ ರೋಗ ಸೇರಿದಂತೆ ಇತರ ರೋಗ ನಿರೋಧಕ ಗುಣ ಹೊಂದಿರುವ ಈ ಭತ್ತದ ತಳಿಯನ್ನು ಚಾಮರಾಜನಗರದ ಕೃಷಿವಿಜ್ಞಾನ ಕೇಂದ್ರ ಜಿಲ್ಲೆಯ ರೈತರಿಗೆ ಪರಿಚಯಿಸಿದೆ.
ಜಿಲ್ಲೆಯ ವಿವಿಧೆಡೆ 100 ಮಂದಿ ರೈತರಿಗೆ ಉಚಿತವಾಗಿ ಈ ತಳಿಯ ಭತ್ತದಬೀಜ ನೀಡಿ ಬೆಳೆ ಬೆಳೆಯಲು ಎಲ್ಲಾ ರೀತಿಯ ನೆರವನ್ನು ಕೃಷಿ ವಿಜ್ಞಾನಕೇಂದ್ರ ನೀಡಿತ್ತು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಐಎನ್.ಆರ್ ತಳಿಯ ಭತ್ತ ಬೆಳೆದ ರೈತರಿಗೆ ಬಂಪರ್ ಇಳುವರಿ ಬಂದಿದೆ. ಸಾಮಾನ್ಯವಾಗಿ ಬೇರೆ ಭತ್ತದ ತಳಿಗಳು ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ಬಂದರೆ ಐಎನ್.ಆರ್ ತಳಿ ಭತ್ತ 25 ರಿಂದ 26 ಕ್ವಿಂಟಾಲ್ ಇಳುವರಿ ಬಂದಿದೆ..
ಬೇರೆ ಭತ್ತದ ತಳಿಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಹೆಚ್ಚು ಇಳುವರಿ ಬರುವ ಭತ್ತ ಇದಾಗಿದೆ. ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಇದನ್ನು ಡಯಾರೈಸ್ ಎಂದು ಸಹ ಕರೆಯುತ್ತಾರೆ..
ಮಣ್ಣಿನ ಗುಣಮಟ್ಟ ಉತ್ತಮವಾಗಿರುವ ಕಡೆಗಳಲ್ಲಿ ಒಂದು ಎಕರೆಗೆ 35 ರಿಂದ 40 ಕ್ವಿಂಟಾಲ್ ವರೆಗು ಇಳುವರಿ ತೆಗೆಯಬಹುದಾಗಿದೆ. ಇತರ ತಳಿ ಭತ್ತದ ಬೆಳೆಯುವಾಗಿ ಕಳೆ ನಿರ್ವಹಣೆಗೆ ಎಕರೆಗೆ 7 ರಿಂದ 8 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಐ.ಎನ್ಆರ್.ತಳಿಯ ಭತ್ತದ ಬೆಳೆಯಲ್ಲಿ ಕಳೆ ನಿರ್ವಹಣೆಗೆ 1ರಿಂದ 2 ಸಾವಿರ ರೂಪಾಯಿ ಸಾಕು ಎಂಬುಂದು ರೈತರ ಅಭಿಪ್ರಾಯವಾಗಿದ್ದು ಒಟ್ಟಾರೆ ಬೇರೆ ತಳಿಯ ಭತ್ತಕ್ಕೆ ತಗಲುವ ವೆಚ್ಚಕ್ಕಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ತೆಗೆಯಬಹುದು ಎಂಬುದನ್ನು ಜಿಲ್ಲೆಯ ರೈತರು ತೋರಿಸಿಕೊಟ್ಟಿದ್ದಾರೆ.