Dharwad: ಕಳೆದ 3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ವೇತನವನ್ನೇ ಕೊಟ್ಟಿಲ್ಲ!

Dharwad: ಕಳೆದ 3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ವೇತನವನ್ನೇ ಕೊಟ್ಟಿಲ್ಲ!

Suvarna News   | Asianet News
Published : Jan 08, 2022, 09:38 AM ISTUpdated : Jan 08, 2022, 10:38 AM IST

ರಾಜ್ಯದಲ್ಲಿ ಈಗಾಗಲೆ ಮೂರನೇಯ ಅಲೆ ಶುರುವಾಗಿದೆ. ಇತ್ತ ಸರಕಾರ ಕೊರೋನಾ ನಿಯಂತ್ರಣ ಮಾಡಲು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರನ್ನ ಬಳಸಿಕೊಂಡಿತ್ತು. ಆದರೆ ಅವರಿಗೆ  ಕಳೆದ ಮೂರು ತಿಂಗಳಿಂದ ವೇತನವನ್ನೇ ಕೊಡ್ತಾ ಇಲ್ಲ!

ಧಾರವಾಡ (ಜ. 08): ರಾಜ್ಯದಲ್ಲಿ ಈಗಾಗಲೆ ಮೂರನೇಯ ಅಲೆ  (3rd Wave) ಶುರುವಾಗಿದೆ. ಇತ್ತ ಸರಕಾರ ಕೊರೋನಾ ನಿಯಂತ್ರಣ ಮಾಡಲು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರನ್ನ  (ASHA Workers) ಬಳಸಿಕೊಂಡಿತ್ತು. ಆದರೆ ಅವರಿಗೆ  ಕಳೆದ ಮೂರು ತಿಂಗಳಿಂದ ವೇತನವನ್ನೇ ಕೊಡ್ತಾ ಇಲ್ಲ!

ಧಾರವಾಡ ಜಿಲ್ಲಾ ಪಂಚಾಯತಿ ಆವರಣದಲ್ಲಿ ನಮಗೆ ನಮ್ಮ‌ವೇತವನ್ನ ಕೊಡಿ ಎಂದು ಪ್ರತಿಭಟನೆಯನ್ನ ಮಾಡಿದ್ದಾರೆ ಆಶಾ ಕಾರ್ಯಕರ್ತೆಯರು. ಧಾರವಾಡ ಎರಡು ಅಲೆಯಲ್ಲಿ ಆಶಾ ಕಾರ್ಯಕರ್ತೆಯರು ಭಯದ ವಾತಾವರಣದಲ್ಲಿ ಕೆಲಸ ಮಾಡಿದ್ದಾರೆ. ಮನೆಮನೆಗೆ ತೆರಳಿ ಕೊರೋನಾ ರೋಗಿಗಳ ಜೊತೆ ಕೆಲಸ ಮಾಡಿದ್ದಾರೆ. ಜೀವದ ಹಂಗು ತೊರೆದು ಕೊರೋನಾ ಕಾಲದಲ್ಲಿ ಕೆಲಸ ಮಾಡಿದ್ದಾರೆ. ಎರಡು ವರ್ಷದಲ್ಲಿ ನಮಗೆ ಮಾಸ್ಕ‌ ಕೊಡದೇ ಕೆಲಸ ಮಾಡಿಸಿಕೊಂಡಿದೆ ಜಿಲ್ಲಾಡಳಿತ, ಮೂರನೇಯ ಅಲೆ ಬರುತ್ತೆ ನಮಗೆ ಕೆಲಸಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ, ಕಳೆದ ಮೂರು ತಿಂಗಳಿಂದ ಕೋವಿಡ್ ಕೆಲಸ ಮಾಡಿದಕ್ಕೆ 1000 ಹಣ ಕೊಡ್ತಾ ಇದಾರೆ ಅಷ್ಟೆ ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ಹಾಕಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ತುಂಬಾ ದೊಡ್ಡದಿದೆ . ಆದರೆ ಕೇವಲ ಮೂರು ತಿಂಗಳಿಂದ ‌ಒಂದು ಸಾವಿರ ಸಿಕ್ಕಿದ್ದು,  ಆರ್ ಸಿ ಎಚ್ ನಿಂದ ಬರೋ ಹಣವೂ ಆಶಾಗಳಿಗೆ ಸಿಗ್ತಿಲ್ಲ, ಎಂದು ದೂರಿದ್ದಾರೆ.

ಎರಡು ತಾಸು ಕೆಲಸಕ್ಕೆ ಅಂತ ಕರೆಸಿ ಇಡಿ ದಿನ ಕೆಲಸ ಮಾಡಿಸುತ್ತಿರುವ ಆರೋಗ್ಯ ಇಲಾಖೆ ನಮಗೆ ನಮ್ಮ‌ ವೇತನವನ್ನ ಮಾತ್ರ ಕೊಡ್ತಿಲ್ಲ ಎಂದು  ಐದನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ‌ ಆಕ್ರೋಶವನ್ನ ಹೊರ ಹಾಕಿದ್ದಾರೆ. ಇನ್ನು ಕಳೆದ ಎರಡು ಮೂರು ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಬರಬೇಕಾದ ಇನ್ಸೇಂಟಿವ್ ಹಣ ಕೂಡಾ ಬರ್ತಿಲ್ಲ, ನಮ್ಮ‌ವೇತವನ್ನ‌ 12 ಸಾವಿರಕ್ಕೆ ಏರಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ನಮಗೆ ವೇತನವನ್ನ‌ಹೆಚ್ಚಳ ಮಾಡಬೇಕು ಮತ್ತು ತಮ್ಮ ವೇತನವನ್ನ ಕೊಡಬೇಕು ಎಂದು ಹೋರಾಟವನ್ನ‌ ಮಾಡುತ್ತಿದ್ದಾರೆ. ಇನ್ನು ಆದಷ್ಟು ಬೇಗ ಆಶಾ ಕಾರ್ಯಕರ್ತೆ ಯರ ವೇತವನ್ನ ಜಿಲ್ಲಾಡಳಿತ ಆದಷ್ಟು ಬೇಗ ಕೊಡಬೇಕೆಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಕಳಕಳಿ.

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more