ಅಗಲಿದವರನ್ನೂ ಸ್ಮರಿಸುವ 'ಜನಪದ ದೀಪಾವಳಿ' ಆಚರಣೆ: ಖಾದ್ಯಗಳನ್ನಿಟ್ಟು ಸತ್ತವರನ್ನ ಬರಮಾಡಿಕೊಳ್ಳೋದು ಸಂಪ್ರದಾಯ

Nov 14, 2023, 10:49 AM IST

ದೀಪ ಹಚ್ಚೋದು. ಪಟಾಕಿ ಹೊಡೆಯೋದು, ಹೊಟ್ಟೆ ತುಂಬಾ ತಿನ್ನೋದು, ದೀಪಾವಳಿ (Deepavali) ಬಂದ್ರೆ ಮತ್ತೇನು ಮಾಡ್ತೀವಿ ಅಲ್ವಾ..? ಆದ್ರೆ ತುಳುನಾಡಿನಲ್ಲಿTulu) ಈ ಹಬ್ಬಕ್ಕೆ ಬೇರೆಯದೇ ಮಹತ್ವ ಇದೆ. ದೀಪಾವಳಿ ಬಂದಾಗ ಸತ್ತವರನ್ನೆಲ್ಲಾ ಬರಮಾಡಿಕೊಳ್ಳುವುದೇ ಉಡುಪಿ(Udupi) ದೀಪಾವಳಿ ಸ್ಪೆಷಲ್. ತುಳುವರ ನಂಬಿಕೆಯ ಪ್ರಕಾರ ನಮ್ಮನ್ನು ಅಗಲಿದ ಹಿರಿಯರು ಸ್ವರ್ಗಕ್ಕೋ, ನರಕಕ್ಕೋ ಹೋಗೋದಿಲ್ಲ. ಮನೆಯ ದೈವಗಳ ಸನ್ನಿಧಾನದಲ್ಲೇ ಇರ್ತಾರಂತೆ. ಹಾಗಾಗಿ ದೀಪಾವಳಿಯಲ್ಲಿ ನಾವು ಸಂಭ್ರಮಿಸುವ ಮುನ್ನ ನಮ್ಮ ಪೂರ್ವಿಕರನ್ನು ಕರೆದು ಅವರಿಗೆ ಹೊಸಬಟ್ಟೆ ಕೊಟ್ಟು, ತಿನ್ನಲ್ಲು ಖಾದ್ಯಗಳನ್ನಿಟ್ಟು ಬರಮಾಡಿಕೊಳ್ಳೋದು ಸಂಪ್ರದಾಯ. ಅದಕ್ಕೆ ದೀಪಾವಳಿಯ ಒಂದು ದಿನವನ್ನು ‘ಸೈದಿನಕ್ಲೆನ ಪರ್ಬ’ ಅಂದ್ರೆ ಸತ್ತವರ ಹಬ್ಬ ಅಂತಾನೇ ಆಚರಿಸಲಾಗುತ್ತೆ. ವಾಯ್ಸ್: ನಾಲ್ಕಾರು ಶತಮಾನಗಳಿಂದ ಅಗಲಿದ ಚೇತನಗಳನ್ನು ಆಹ್ವಾನಿಸಿ ಹಬ್ಬ ಆಚರಿಸಲಾಗುತ್ತೆ. ಅವರು ತೊಡಲೆಂದು ಮೀಸಲಿಟ್ಟ ಬಟ್ಟೆ, ಬಳಸುತ್ತಿದ್ದ ಬಳೆ, ಕರಿಮಣಿ ಇತ್ಯಾದಿಗಳನ್ನು ಪೆಟ್ಟಿಗೆಯಿಂದ ಹೊರ ತೆಗೆದು ಪೂರ್ವಿಕರನ್ನು(ancestors) ಸ್ಮರಿಸಿಕೊಳ್ತಾರೆ. ಕುಟುಂಬದ ಹಿರಿಯರು ಮಾತ್ರವಲ್ಲ ದೈವಗಳ ಆರಾಧನೆಯೂ ನಡೆಯುತ್ತೆ. ಕುಟುಂಬವನ್ನು ಸಲಹಿಕೊಂಡು ಬಂದ ದೈವಗಳಿಗೆ ಅಲಂಕಾರ ಮಾಡಿ, ದೀಪ ಬೆಳಗಿ, ಎಡೆ ಇಟ್ಟು ಆರಾಧಿಸುವ ಜನಪದ ಪದ್ದತಿ ಇವತ್ತಿಗೂ ಜೀವಂತವಾಗಿದೆ. 

ಇದನ್ನೂ ವೀಕ್ಷಿಸಿ:  ಕುರಿಗಾಹಿಗಳಿಂದ ಸಂಭ್ರಮದ ದೀಪಾವಳಿ ಆಚರಣೆ: ಕುರಿಗಳಿಗೆ ಬಣ್ಣದ ಅಲಂಕಾರ ಮಾಡಿ ಸಡಗರ