Jun 23, 2024, 10:00 AM IST
2011, ಸೆಪ್ಟೆಂಬರ್ 9ರಂದು ಪತ್ನಿ ವಿಜಯಲಕ್ಷ್ಮೀ(Vijayalakshmi) ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದರ್ಶನ್ ಪರಪ್ಪನ ಅಗ್ರಹಾರ(Parappana Agrahara) ಸೇರಿದ್ದರು. ಈಗ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Chitradurga Renukaswamy murder case) ಮತ್ತೊಮ್ಮೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ದರ್ಶನ್(Darshan) ಸೇರಿ ನಾಲ್ವರು ಆರೋಪಿಗಳನ್ನ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಾದ ಪ್ರತಿವಾದ ಆಲಿಸಿ ಜುಲೈ4 ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ. ಉತ್ತರ ಪ್ರದೇಶದಲ್ಲಿ ಮಾತ್ರ ಕೇಳಿ ಬರ್ತಿದ್ದ ಬುಲ್ಡೋಜರ್ ಪಾಲಿಟಿಕ್ಸ್ ಆಂಧ್ರದಲ್ಲೂ ಸದ್ದು ಮಾಡ್ತಿದೆ. ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಟಿಡಿಪಿ- ಬಿಜೆಪಿ- ಜನಸೇನಾ ಮೈತ್ರಿಕೂಟ ಅಧಿಕಾರ ಹಿಡಿದಿದೆ. ಅಧಿಕಾರ ಸ್ವೀಕರಿಸಿ 15 ದಿನದಲ್ಲೇ ವೈಎಸ್ಆರ್ ನಿರ್ಮಾಣ ಹಂತದ ಕಚೇರಿಯನ್ನೇ ನಾಯ್ಡು ಸರ್ಕಾರ ಧ್ವಂಸಗೊಳಿಸಿದೆ. ಈಗ ಟಿಡಿಪಿ- ವೈಎಸ್ಆರ್ ಪಕ್ಷಗಳ ನಡುವೆ ದ್ವೇಷ ರಾಜಕೀಯ ಸದ್ದು ಮಾಡ್ತಿದೆ.
ಇದನ್ನೂ ವೀಕ್ಷಿಸಿ: Renukaswamy Murder Case: ಮನುಷ್ಯ ರೂಪದ ರಾಕ್ಷಸರ ಅಟ್ಟಹಾಸಕ್ಕೆ ಜೀವ ಬಲಿ ! ದರ್ಶನ್ ಕೋಪ..ಕ್ರೌರ್ಯಕ್ಕೆ ಕಾರಣವೇನು ಗೊತ್ತಾ..?