ದಾವಣಗೆರೆ: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ, ಇಡೀ ಗ್ರಾಮದಲ್ಲಿ ಆವರಿಸಿದ ದಟ್ಟ ಹೊಗೆ!

Jan 7, 2025, 11:50 AM IST

ದಾವಣಗೆರೆ(ಜ.07):  ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಇಡೀ ಗ್ರಾಮದಲ್ಲಿ ದಟ್ಟ ಹೊಗೆ ಆವರಿಸಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಓಡಿ ಹೋಗಿ ಪ್ರಾಣಿ ಉಳಿಸಿಕೊಂಡ ಕುಟುಂಬಸ್ಥರು. ಬೆಂಕಿ‌ ನೋಡಿ ಗ್ರಾಮದ ಜನ ಆತಂಕಗೊಂಡಿದ್ದಾರೆ. 

ಗ್ರಾಮದ ರೈತ ಕಾಶಪ್ಪ ಎಂಬುವರ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ತಾಯಿ ಮಗ ಇಬ್ಬರೇ ವಾಸವಾಗಿದ್ದರು. ಅಡುಗೆ ಮನೆಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು, ಇದನ್ನ ನೋಡಿ ತಾಯಿ ಮಗ ಹೊರಗೆ ಓಡಿ ಬಂದಿದ್ದಾರೆ. ಇವರು ಹೊರ ಹೋದ ಎರಡು ನಿಮಿಷದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. 

ಪೋಷಕರೇ ಎಚ್ಚರ: ಆಟವಾಡುತ್ತಾ ನೀರಿನ ಮೋಟರ್ ಹಿಡಿದ ಮಗು ಕರೆಂಟ್‌ ಶಾಕ್‌ನಿಂದ ಸಾವು!

ಬೆಂಕಿಯನ್ನ ನಂದಿಸಲು ಚನ್ನಗಿರಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹರ ಸಾಹಸಪಟ್ಟಿದ್ದಾರೆ. ಬೇರೆ ಮನೆಗಳಿಗೆ ಬೆಂಕಿ ಆವರಿಸಿದಂತೆ ಕಟ್ಟಚ್ಚರಿಕೆ ವಹಿದ್ದರು. ಮನೆ ಸಂಪೂರ್ಣ ಸುಟ್ಟುಕರಕಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.