ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

Nov 14, 2023, 11:00 AM IST


ಗುಂಪು ಗುಂಪಾಗಿ ಕುಳಿತು ದೀಪಗಳ ತಯಾರಿಯಲ್ಲಿ ನಿರತರಾಗಿರೋ ಮಹಿಳೆಯರು. ದೀಪಗಳ ತಯಾರಿಯನ್ನ ಕುತೂಹಲದಿಂದ ನೋಡ್ತಿರೋ ಜನ. ಮತ್ತೊಂದೆಡೆ ಸಿದ್ಧವಾಗಿರೋ ದೀಪಗಳನ್ನ(Deepas) ಖರೀದಿ ಮಾಡ್ತಿರೋ ಸಾರ್ವಜನಿಕರು. ಈ ದೃಶ್ಯ ಕಂಡುಬಂದಿದ್ದು ದೊಡ್ಡಬಳ್ಳಾಪುರದಲ್ಲಿ(Doddaballapura). ಬೆಳಕಿನ ಹಬ್ಬ ದೀಪಾವಳಿ ಆಚರಣೆ (Deepavali celebration)ಜೋರಾಗಿದೆ. ದೀಪಾವಳಿ ಹಬ್ಬಕ್ಕೆಂದೇ ಮಾರುಕಟ್ಟೆಯಲ್ಲಿ ತರಹೇವಾರಿ ದೀಪಗಳು ಲಗ್ಗೆ ಇಟ್ಟಿವೆ. ಈ ಬಾರಿ ಮಣ್ಣಿನ ದೀಪಗಳ ಬದಲಿಗೆ ಸಗಣಿ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಸಗಣಿ ದೀಪ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ರಾಷ್ಟ್ರೋತ್ಥಾನ ಗೋ ಶಾಲೆಯಲ್ಲಿ(Rashtrothana Goshala) ಸಗಣಿ ದೀಪಗಳನ್ನ ತಯಾರಿಸಲಾಗ್ತಿದೆ. ಸಗಣಿ ದೀಪ ತಯಾರಿಸಿ ಅದನ್ನು 3 ದಿನ ಬಿಸಿಲಿನಲ್ಲಿ ಒಣಗಿಸಿ ಮಾರುಕಟ್ಟೆಗೆ ಕಳಿಸಲಾಗ್ತಿದೆ. ಮಾರುಕಟ್ಟೆಗೆ ಬಂದಿರೋ ಸಗಣಿ ದೀಪ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಗಣಿ ದೀಪಗಳಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ ಅಂತಾರೆ ಗೋಶಾಲೆ ಸಿಬ್ಬಂದಿ.ಸಗಣಿ ದೀಪ ಹಚ್ಚಿದ್ರೆ ಅದರಿಂದ ಬರುವ ಹೊಗೆ ಗಾಳಿಯ ಜತೆ ಸೇರಿ ಗಾಳಿ ಶುದ್ಧವಾಗುತ್ತಂತೆ. ಜೊತೆಗೆ ಶುದ್ಧ ಗಾಳಿಯಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗಲಿದೆ ಅಂತಾರೆ ಗೋಶಾಲೆ ಸಿಬ್ಬಂದಿ. ಸಗಣಿ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಡ್ತಿರೋದು ಖುಷಿಯ ಸಂಗತಿ. ಸಗಣಿ ದೀಪಗಳನ್ನ ಹಚ್ಚುವ ಮೂಲಕ ಜನ ಆರೋಗ್ಯಕರ ದೀಪಾವಳಿ ಆಚರಣೆ ಮಾಡಲಿ ಅನ್ನೋದು ನಮ್ಮ ಆಶಯ.

ಇದನ್ನೂ ವೀಕ್ಷಿಸಿ:  ಅಗಲಿದವರನ್ನೂ ಸ್ಮರಿಸುವ 'ಜನಪದ ದೀಪಾವಳಿ' ಆಚರಣೆ: ಖಾದ್ಯಗಳನ್ನಿಟ್ಟು ಸತ್ತವರನ್ನ ಬರಮಾಡಿಕೊಳ್ಳೋದು ಸಂಪ್ರದಾಯ