Oct 13, 2023, 10:48 AM IST
ಕರ್ನಾಟಕ ವಿಧಾನಸಭೆ ಎಲೆಕ್ಷನ್.. ಬಿಜೆಪಿ -ಕಾಂಗ್ರೆಸ್ ಪ್ರತಿಷ್ಠೆ ಮಧ್ಯೆ ಜೆಡಿಎಸ್ ಕೂಡ ಪೈಪೋಟಿಗೆ ಇಳಿದಿತ್ತು. ಹೀಗಾಗಿ ಅಂದು ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಅಬ್ಬರದ ಪ್ರಚಾರಕ್ಕೆ ಇಳಿದಿತ್ತು. ಬಿಜೆಪಿಯ(BJP) ಘಟಾನುಘಟಿಗಳು ಕ್ಯಾಂಪೇನ್ ಮೇಲೆ ಕ್ಯಾಂಪೇನ್ ನಡೆಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ(JP Nadda) ಕೂಡ ಹಲವು ಬಾರಿ ರಾಜ್ಯಕ್ಕೆ ಬಂದು ಕ್ಯಾಂಪೇನ್ ಮಾಡಿದ್ದರು. 2023ರ ಏಪ್ರಿಲ್ 19 ರಂದು ಹಾವೇರಿಯ(Haveri) ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪರ ಭಾಷಣ ಮಾಡಿದ್ದ ನಡ್ಡಾ, ಕರ್ನಾಟಕದ ಮೇಲೆ ಪ್ರಧಾನಿ ಮೋದಿ(Narendra Modi) ಆಶೀರ್ವಾದ ಇದೆ. ಬಿಜೆಪಿಯನ್ನ ಗೆಲ್ಲಿಸಿದ್ರೆ ಕರ್ನಾಟಕದಲ್ಲಿ ವಿಕಾಸ ಆಗುತ್ತೆ ಅಂದಿದ್ರು. ಆದ್ರೆ ಜೆಪಿ ನಡ್ಡಾ ಈ ಭಾಷಣದ ವಿರುದ್ಧ ದೂರು ದಾಖಲಾಯ್ತು. ಮತದಾರರಿಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ ಸರ್ಕಾರಿ ಅಧಿಕಾರಿ ಲಕ್ಷ್ಮಣ ನಂದಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಮನವಿ ಮಾಡಿದ್ರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಕೇಸ್ ದಾಖಲಾಗ್ತಿದ್ದಂತೆ ಇತ್ತ ನಡ್ಡಾ ಪರ ವಕೀಲರು ಧಾರವಾಡ ವಿಭಾಗಿಯ ಪೀಠದ ಮೆಟ್ಟಿಲೇರಿದ್ರು. ಮತ ಕೇಳೋದು ಪ್ರತಿಯೊಬ್ಬರ ಹಕ್ಕು, ಜೆ.ಪಿ ನಡ್ಡಾ ಕೂಡ ಅದೇ ರೀತಿಯಲ್ಲಿ ಮತಕೇಳಿದ್ದಾರೆ ಇದರಲ್ಲಿ ಪ್ರಚೋದನೆ ಇಲ್ಲ ಪ್ರಕರಣ ರದ್ದು ಮಾಡುವಂತೆ ವಾದ ಮಂಡಿಸಿದ್ರು. ಕೊನೆಗೆ ಕೋರ್ಟ್ ಜೆಪಿ ನಡ್ಡಾಗೆ ರಿಲೀಫ್ ನೀಡಿದೆ. ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ.ಜೆ.ಪಿ ನಡ್ಡಾ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್‌ನ ನಾಗಭೂಷಣ ವಿಶೇಷ ಪೀಠ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನ ನವೆಂಬರ್ 3ಕ್ಕೆ ಮುಂದೂಡಿದ್ದು, ಸದ್ಯ ಜೆ.ಪಿ ನಡ್ಡಾಗೆ ರಿಲೀಫ್ ಕೊಟ್ಟಿದೆ.
ಇದನ್ನೂ ವೀಕ್ಷಿಸಿ: ಕಲ್ಪತರು ನಾಡಿಗೂ ಕಾವೇರಿ ನೀರಿನ ಸಂಕಷ್ಟ: ತುಮಕೂರಿನಲ್ಲಿ ಕುಡಿಯೋ ನೀರಿಗೆ ಹಾಹಾಕಾರ ?