Oct 12, 2023, 11:26 AM IST
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹುಲಿಗೆಪ್ಪ ಕಳೆದ 25 ವರ್ಷಗಳ ಹಿಂದೆ ಕೃಷಿ ಮಾಡಲು ಗೊಬ್ಬರ ಮತ್ತು ಕ್ರಿಮಿನಾಶಕ ತಂದಿದ್ದರಂತೆ. ಆದ್ರೆ ಅದಕ್ಕೆ ಹಣ ಕಟ್ಟಲು ಆಗದೇ ತಮ್ಮ ಜಮೀನು ಅಡವಿಟ್ಟು ಗೂಳೆ ಹೋಗಿದ್ರು. ಆ ಜಮೀನಿನಲ್ಲಿ ಅಬ್ರಾಹಮಪ್ಪ ದಬ್ಬಾಳಿಕೆಯಿಂದ ಕೃಷಿ ಮಾಡಿಕೊಂಡು ಇದ್ದ, ಈ ವರ್ಷ ಕೋರ್ಟ್ ಹುಲಿಗೆಪ್ಪನಿಗೆ ಜಮೀನು ವಾಪಸ್ ಕೊಡಿಸಿ ಆದೇಶ ನೀಡಿತ್ತು. ಹೀಗಾಗಿ ಹುಲಿಗೆಪ್ಪ ಸಹೋದರರು ಸೇರಿ ಹತ್ತಿ ಬಿತ್ತನೆ ಮಾಡಿದ್ರು. ಹತ್ತಿ ಬೆಳೆ(cotton crop) ಕೂಡ ಚೆನ್ನಾಗಿ ಬಂದಿತ್ತು.. ಆದ್ರೆ, ಈಗ ಎಲ್ಲಾ ಸರ್ವನಾಶ ಮಾಡಿದ್ದಾರೆ. ಇಡೀ ಕುಟುಂಬದ 25ಕ್ಕೂ ಹೆಚ್ಚು ಜನರು ಕೃಷಿ ಮಾಡಿ, ಬೆಳೆಯನ್ನೇ ನಂಬಿಕೊಂಡಿದ್ರು. ಈಗ ಏಕಾಏಕಿ ಅಬ್ರಾಹಮಪ್ಪ ಹತ್ತಿ ಬೆಳೆನಾಶ ಮಾಡಿದಕ್ಕೆ ಹುಲಿಗೆಪ್ಪನ ಕುಟುಂಬಸ್ಥರು ಬೀದಿಗೆ ಬಿದ್ದಾರೆ. ಬೆಳೆನಾಶ ಮಾಡಿದ ಅಬ್ರಾಹಮಪ್ಪನ ವಿರುದ್ಧ ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಷ್ಟಪಟ್ಟು ದುಡಿದು ಬೆಳೆದ ಬೆಳೆ ಹಾಳು ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಹುಲಿಗೆಪ್ಪ ಕುಟುಂಬಸ್ಥರು ಪೊಲೀಸರಿಗೆ(police) ದೂರು ಕೊಟ್ಟಿದ್ದಾರೆ. ಆದ್ರೆ ಪೊಲೀಸರು ಮಾತ್ರ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಕಷ್ಟಪಟ್ಟು ಬೆಳೆದಿದ್ದ 9 ಎಕರೆ ಹತ್ತಿ ಬೆಳೆ ಸಂಪೂರ್ಣ ನಾಶ ಮಾಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ.
ಇದನ್ನೂ ವೀಕ್ಷಿಸಿ: ಯಾದಗಿರಿ ರೈತರಿಗೆ 2.5 ಕೋಟಿ ಪಂಗನಾಮ: ಹತ್ತಿ ಖರೀದಿಸಿ..150 ಅನ್ನದಾತರಿಗೆ ಮೋಸ