Chikkamagaluru ಆದಾಯವಿದ್ರು ಡೋಂಟ್ ಕೇರ್ : ವಾಣಿಜ್ಯ ಮಳಿಗೆಗಳು ಅನಾಥ

Nov 18, 2021, 10:05 AM IST

ಬೆಂಗಳೂರು ( ನ.18):  ಲಕ್ಷಾಂತರ ರು. ಆದಾಯ ತಂದುಕೊಡುವ ಮಳಿಗೆಗಳು ದುಸ್ಥಿತಿಗೆ ತಲುಪಿವೆ. ಇದನ್ನು ಕಂಡು ಜನರು ಮರುಗುತ್ತಿದ್ದಾರೆ. ಕಾಫಿ ನಾಡು ಚಿಕ್ಕಮಗಳೂರಿನ ಕೊಪ್ಪ ಪಟ್ಟಣ ಪಂಚಾಯಿತಿ ಜನರ ತೆರಿಗೆ ಹಣದಲ್ಲಿ 19 ಮಳಿಗೆಗಳನ್ನು ನಿರ್ಮಾಣ ಮಾಡಿತ್ತು. ಕೆಲ ವರ್ಷ ಹರಾಜು ಪ್ರಕ್ರಿಯೆ ನಡೆದು ಹಲವರ ಕುಟುಂಬಕ್ಕೆ ಜೀವನದ ದಾರಿ ಆಗಿತ್ತು. ಕೊಟ್ಯಂತರ ರು ವೆಚ್ಚದಲ್ಲಿ ನಿರ್ಮಿಸಿದ್ದ ಮಳಿಗೆಗಳು ಅನಾಥವಾಗಿವೆ. 

ಕಟಾವಾಗಿದ್ದ ಬೆಳೆ ನೀರುಪಾಲು, ತೋಟದಲ್ಲೇ ಕೊಳೆಯುತ್ತಿದೆ ಕಾಫಿ: ರೈತಾಪಿ ವರ್ಗ ಕಂಗಾಲು

ಶಾಸಕ ರಾಜೇಗೌಡ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರು ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಸರ್ಕಾರಕ್ಕೆ ಇದರಿಂದ ಆದಾಯ ಇದ್ದರೂ ಕೂಡ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಪಟ್ಟಣದ ಹೃದಯಭಾಗದಲ್ಲಿ ಇದ್ದರೂ ಇದರ ಬಗ್ಗೆ ಗಮನ ಮಾತ್ರ ಹರಿಸುತ್ತಿಲ್ಲ.