Chikkamagaluru ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು

Nov 15, 2021, 9:56 AM IST

ಬೆಂಗಳೂರು (ನ.15):  ಪ್ರಸಕ್ತ ಸಾಲಿನಲ್ಲಿ ವರ್ಷಪೂರ್ತಿ ಮಳೆ ಸುರಿಯುತ್ತಿರುವುದರಿಂದ ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ. ಭಾರೀ ಮಳೆಯಿಂದ ಕಾಫಿ ಬೆಳೆ ಸಂಪೂರ್ಣ ನೆಲಕ್ಕೆ ಉದುರಿ ಮಣ್ಣು ಪಾಲಾಗಿದೆ. ಈ ಸಾಲಿನ ಕಾಫಿ ಕೊಯ್ಯಲು ಸಾಧ್ಯವಾಗದೆ, ಬಿದ್ದ ಕಾಫಿಯನ್ನು ಆಯ್ದುಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿರುವುದರಿಂದ ತೊಂದರೆಗೊಳಗಾಗಿದ್ದಾರೆ.

ಕಾಫಿನಾಡಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಂದ ಕಸದ ರಾಶಿ, ಅಧಿಕಾರಿಗಳು, ಸ್ಥಳೀಯರಿಂದ ಸ್ವಚ್ಛತಾ ಅಭಿಯಾನ
 
ಕಳೆದ 10 ದಿನಗಳಿಂದ ಚಿಕ್ಕಮಗಳೂರು ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದ ರೈತರ ತತ್ತರಿಸುವಂತಾಗಿದೆ. ಕೈಗೆ ಬಮದ ತುತ್ತು ಬಾಯಿಗೆ ಬಾರದಂತಾಗಿದೆ. ಅಪಾರ ಪ್ರಮಾಣದಲ್ಲಿ ಕಾಫಿ ಬೆಳೆ ನಷ್ಟವಾಗಿದೆ.  ಯಾವ ರೀತಿ ಪರಿಹಾರ ಮಾರ್ಗ ಎನ್ನುವುದು ತಿಳಿಯದೇ ಕಂಗಾಲಾಗಿದ್ದಾರೆ. ಕಳೆದ ಜನವರಿಯಲ್ಲೇ ಮಳೆಯಾದ ಪರಿಣಾಮ ಹೆಚ್ಚಿನ ಅರೇಬಿಕಾ ಕಾಫಿ ತೋಟಗಳಲ್ಲಿ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಿಂದಲೇ ಕಾಫಿ ಹಣ್ಣಾಗಲು ಪ್ರಾರಂಭವಾಗಿದೆ. ಮುಂಗಾರಿನ ಮಳೆ ಪ್ರಾರಂಭವಾದಾಗಿನಿಂದಲೂ ಬಿಡದೆ ನಿರತಂತರವಾಗಿ ಸುರಿಯುತ್ತಿರುವುದರಿಂದ ಕಾಫಿ ಗಿಡದಿಂದ ಬಿಡಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್‌ ತಿಂಗಳಿನಲ್ಲಿ ಹಣ್ಣಾದ ಕಾಫಿ ಉದುರಿ ಅಲ್ಲಿಯೇ ಗಿಡಗಳಾಗಿದೆ. ಈಗಲೂ ಹಣ್ಣಾದ ಕಾಫಿ ಗಿಡದಲ್ಲಿಯೇ ಬಿಡುವಂತಾಗಿದೆ.