ಹಾವಿನ ಬಾತ್‌ರೂಂ ಮೋಹ...  ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು..!

ಹಾವಿನ ಬಾತ್‌ರೂಂ ಮೋಹ... ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು..!

Published : Feb 03, 2022, 01:09 PM IST
  • ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು!
  • ಪೈಪ್ ಮೂಲಕ ಬಾತ್‌ರೂಂ ಪ್ರವೇಶಿಸಿ ಪುನಃ ಅದೇ ಪೈಪ್ ಮೂಲಕ ಹೊರಗೆ
  • ಶಿವಮೊಗ್ಗದ ಮದಾರಿಪಾಳ್ಯದ ಮನೆಯೊಂದರಲ್ಲಿ ವಿಚಿತ್ರ ಘಟನೆ

ಶಿವಮೊಗ್ಗ(ಫೆ.3): ನಾಗರ ಹಾವೊಂದರ ಬಾತ್‌ರೂಂ ಮೋಹ ಈಗ ಶಿವಮೊಗ್ಗದಲ್ಲಿ ಚರ್ಚೆಯ ವಿಷಯವಾಗಿದೆ. ಹೌದು,  ಇದೆಂಥಾ  ವಿಚಿತ್ರ ಅಂತಾ ನಿಮಗನಿಸಬಹುದು. ನಗರದ ಮದಾರಿಪಾಳ್ಯದ  ಮೊಹಮ್ಮದ್ ಜಿಯಾವುಲ್ಲಾ ಎಂಬುವರ ಮನೆಯಲ್ಲಿ ಕಳೆದ 3 ತಿಂಗಳಿಂದ ಹಾವೊಂದು ಬಾತ್‌ರೂಂಗೆ ಪದೇ ಪದೇ ವಿಸಿಟ್‌ ಕೊಡುತ್ತಿದೆ. ಯಾರೂ ಇಲ್ಲದ ವೇಳೆ ಪೈಪ್ ಮೂಲಕ ಬಾತ್ ರೂಂ ಪ್ರವೇಶಿಸಿ ಪುನಃ ಅದೇ ಪೈಪ್ ಮೂಲಕ ಹೊರ ಹೋಗುತ್ತಿದೆ. ಹಿಂದೊಮ್ಮೆ ಮನೆಯವರು ಆಕಸ್ಮಿಕವಾಗಿ ಹಾವು ಬಾತ್ ರೂಂ ನಲ್ಲಿ ಬಂದಿದ್ದು ನೋಡಿದ್ದಾರೆ, ಸ್ವಲ್ಪ ಸಮಯದ ನಂತರ ಅದು ಹೊರ ಹೋಗುವುದನ್ನೂ ನೋಡಿದ್ದಾರೆ. ಅಂತೂ ಇಂತೂ ಹೊರ ಹೋಯ್ತಲ್ಲ ಎಂದು ಸುಮ್ಮನಾಗಿದ್ದಾರೆ. 

ಆದರೆ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿದೆ ಆ ಹಾವು! ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಪುನಃ ಬಾತ್ ರೂಂ ನಲ್ಲಿ ಕಾಣಿಸಿಕೊಂಡಿದೆ.  ಮನೆಯವರಿಗೆ ತಿಳಿಯದಂತೆ ಆಗಾಗ್ಗೆ ಬಾತ್ ರೂಂ ಗೆ ಹಾವು ಬಂದು ಹೋಗುತ್ತಿರುವುದು ಗೊತ್ತಾಗಿದೆ.  ಬಾತ್ ರೂಂನ ನೀರು ಹರಿದು ಹೋಗುವ ಪೈಪ್ ಒಳಗಿಂದ ನಾಗರ ಹಾವೊಂದು ಒಳ ಬಂದು ಹೋಗುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ನಿನ್ನೆ ಮತ್ತೆ ಬಾತ್ ರೂಂ ಪೈಪ್ ನಲ್ಲಿ ಹಾವು ಕಾಣಿಸಿಕೊಂಡಿದ್ದು,  ಗಾಬರಿಗೊಳಗಾದ ಮನೆಯವರು ಉರಗ ಸಂರಕ್ಷಕ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದರು.  ಸ್ಥಳಕ್ಕಾಗಮಿಸಿದ ಕಿರಣ್ , ಸುರಕ್ಷಿತವಾಗಿ ಹಾವನ್ನು ರಕ್ಷಿಸಿದ್ದಾರೆ. 

ಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು... ಮನೆಯಲ್ಲಿತ್ತು 125 ಕ್ಕೂ ಹೆಚ್ಚು ಬಗೆಯ ಹಾವು

ಹಾಗಾದ್ರೆ ಕಳೆದ ಮೂರು ತಿಂಗಳಿನಿಂದ ಹಾವು ಬಾತ್ ರೂಮ್ ಪೈಪ್ ಅನ್ನೇ ವಾಸ ಸ್ಥಾನ ಮಾಡಿಕೊಂಡಿತ್ತಾ? ಎಂಬ ಅನುಮಾನ ಹುಟ್ಟಿಕೊಂಡಿದೆ.  ಆದರೆ ನಾಗರ ಹಾವಿನ ವಿಚಿತ್ರ ವರ್ತನೆ ಮಾತ್ರ ಯಕ್ಷ ಪ್ರಶ್ನೆ ಯಾಗಿ ಉಳಿದಿದೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more