Jan 15, 2023, 3:26 PM IST
ಹುಬ್ಬಳ್ಳಿಯ ಉಣಕಲ್'ನಲ್ಲಿರುವ ಸಿದ್ದಪ್ಪಜ್ಜನ ಮಠಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ ಮಠಕ್ಕೆ ಭೇಟಿ ಕೊಟ್ಟಿದ್ದು, ಬೊಮ್ಮಾಯಿ ಸಿದ್ದಪ್ಪಜ್ಜನ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳಾರತಿ, ತೆಂಗಿನಕಾಯಿ ಒಡೆದು ಸಿಎಂ ನಮಸ್ಕರಿಸಿದ್ದಾರೆ. ಬಳಿಕ ಮಠದಲ್ಲಿ ಉಪಹಾರ ಸೇವಿಸಿದ್ದು, ಸಿಎಂ ಬೊಮ್ಮಾಯಿಗೆ ಸ್ಥಳೀಯ ಮುಖಂಡರು ಸಾಥ್ ನೀಡಿದ್ದಾರೆ.