ಎಲ್ಲಿ ನೋಡಿದ್ರೂ ಶಾಲಾ ಕಟ್ಟಡದಲ್ಲಿ ಬಿರುಕು: ಮೂಲಭೂತ ಸೌಕರ್ಯವಿಲ್ಲದೇ ಸ್ಕೂಲ್‌ ಅಧ್ವಾನ..!

ಎಲ್ಲಿ ನೋಡಿದ್ರೂ ಶಾಲಾ ಕಟ್ಟಡದಲ್ಲಿ ಬಿರುಕು: ಮೂಲಭೂತ ಸೌಕರ್ಯವಿಲ್ಲದೇ ಸ್ಕೂಲ್‌ ಅಧ್ವಾನ..!

Published : Sep 05, 2023, 03:45 PM ISTUpdated : Sep 05, 2023, 03:46 PM IST

ಸರ್ಕಾರಿ ಶಾಲೆಗಳ ಉಳುವಿಗಾಗಿ ಸರ್ಕಾರ ನಾನಾ ಯೋಜನೆಗಳನ್ನ ರೂಪಿಸಿಕೊಳ್ಳುತ್ತೆ. ಆದ್ರೆ, ಇರುವ ಶಾ ಲೆಗಳನ್ನ ಅಭಿವೃದ್ಧಿ ಮಾಡೋದ್ರಲ್ಲಿ ಮಾತ್ರ ಹಿಂದೇಟು ಹಾಕುತ್ತೆ. ಹತ್ತಾರು ವರ್ಷಗಳ ಹಿಂದೆ ಸುತ್ತ ಮುತ್ತ ಹಳ್ಳಿಗಳಿಗೆ ಮಾದರಿ ಆಗಿದ್ದ ಈ ಶಾಲೆ ಇಂದು ಅಳಿವಿನ ಅಂಚಿಗೆ ಹೋಗಿರೋದು ದುರದೃಷ್ಟಕರ. ಅಷ್ಟಕ್ಕೂ ಆ ಶಾಲೆ ಎಲ್ಲಿದೆ? ಆ ಶಾಲೆಯ ಸಮಸ್ಯೆಗಳು ಏನು ಅನ್ನೋದ್ರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ..

ಇವತ್ತೋ‌ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿ ಬಿರುಕು ಬಿಟ್ಟಿರುವ ಸರ್ಕಾರಿ ಶಾಲೆ. ಮತ್ತೊಂದೆಡೆ ಮೇಲ್ಛಾವಣಿಯೂ ಜಡಿ ಮಳೆಗೆ ಕುಸಿತ ಕಾಣುತ್ತಿದ್ದು, ಜೀವ ಕೈಯಲ್ಲಿ ಬಿಗಿ ಹಿಡಿದು ಪಾಠ ಕೇಳ್ತಿರುವ ಮಕ್ಕಳು. ಇಂತಹ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಐತಿಹಾಸಿಕ ಬೆಳಗೆರೆ ಗ್ರಾಮದಲ್ಲಿ. ಕಳೆದ ಐವತ್ತು ವರ್ಷಗಳ ಹಿಂದೆ ಈ ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು (School)ಗ್ರಾಮದಲ್ಲಿ ತಲೆ‌ ಎತ್ತಿದ್ದವು. ಆಗಿನ ಕಾಲದಲ್ಲಿ ಇಡೀ ಹತ್ತು ಹಳ್ಳಿಗಳಿಗೆ ಬೆಳಗೆರೆ ಶಾಲೆ‌ ಮಾದರಿಯಾಗಿತ್ತು. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಶಾಲೆಯು ಅಳಿವಿನಂಚಿಗೆ ತಲುಪಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಗಪ್ ಚುಪ್ ಆಗಿದ್ದಾರೆ.

ಇನ್ನೂ ಗ್ರಾಮದ ಎರಡು ಕಡೆ ಕಿರಿಯ ಮತ್ತು ಹಿರಿಯ ಸರ್ಕಾರಿ ಶಾಲೆಗಳು ಇದ್ದು, ಒಂದು ಕಡೆ ಇರುವ ಕಿರಿಯ ಸರ್ಕಾರಿ ಶಾಲೆಯಲ್ಲಿ ಸುಮಾರು 50ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಅಲ್ಲಿ ಸೂಕ್ತ ಸೌಲಭ್ಯಗಳಿಲ್ಲದೇ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸರಿಯಾದ ಶೌಚಾಲಯವೂ ಇಲ್ಲ, ಮತ್ತೊಂದೆಡೆ ಹಿರಿಯ ಸರ್ಕಾರಿ ಶಾಲೆ ದನದ ದೊಡ್ಡಿಯಂತೆ ಮಾರ್ಪಡಾಗಿದೆ. ಎಲ್ಲಿ ನೋಡಿದ್ರೂ ಬಿರುಕು ಬಿಟ್ಟ ಗೋಡೆಗಳು, ಆತಂಕದಲ್ಲಿಯೇ ಮಕ್ಕಳು ಪಾಠ ಕೇಳ್ತಿದ್ದಾರೆ. ಇಂತಹ ಸ್ಥಿತಿ ನಮ್ಮೂರಿನ ಶಾಲೆಗೆ ಬರುತ್ತೆ ಅಂತ ನಾವು ಯಾರೂ ಭಾವಿಸಿರಲಿಲ್ಲ ಅಂತಾರೆ ಸ್ಥಳೀಯರು

ಸದ್ಯ ಬೆಳಗೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Schoool) ಆರು ಮತ್ತು ಏಳನೇ ತರಗತಿಯ 20ಕ್ಕೂ ಹೆಚ್ಚು ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಶಾಲೆಯ ದುಸ್ಥಿತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇತಿಹಾಸ ಹೊಂದಿರುವ ಶಾಲೆಯಲ್ಲಿ ಇಂದು ಮೂಲಭೂತ ಸೌಕರ್ಯ(Basic falities) ಗಳಿಲ್ಲದೇ ಸೊರಗಿರೋದು ತುಂಬಾ ನೋವಿನ ಸಂಗತಿ.

ಇದನ್ನೂ ವೀಕ್ಷಿಸಿ:  ಪ್ರಕೃತಿ ವಿಕೋಪದಿಂದ ನಲುಗಿ ಹೋಗಿತ್ತು ಆ ಜಿಲ್ಲೆ..! ದಯಾಮರಣ ಕೋರಿ ರಾಷ್ಟ್ರಪತಿಗೆ ಸಂತ್ರಸ್ತೆ ಪತ್ರ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more