ಮೈಸೂರಿನಲ್ಲಿ ಯುವ ದಸರಾ ಸಂಭ್ರಮ: ಮಕ್ಕಳ ದಸರಾದಲ್ಲಿ ಕಳೆಗಟ್ಟಿದ ಕಲರವ

ಮೈಸೂರಿನಲ್ಲಿ ಯುವ ದಸರಾ ಸಂಭ್ರಮ: ಮಕ್ಕಳ ದಸರಾದಲ್ಲಿ ಕಳೆಗಟ್ಟಿದ ಕಲರವ

Published : Oct 19, 2023, 11:07 AM IST

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಾಲ್ಕನೇ ದಿನ ವರ್ಣ ರಂಜಿತವಾಗಿ ಕೊನೆಗೊಂಡಿದೆ. ಹತ್ತುಹಲವು ಕಾರ್ಯಕ್ರಮಗಳ ಮೂಲಕ ನಾಡಹಬ್ಬಕ್ಕೆ‌ ಮೆರಗು ಸಿಕ್ಕಿದೆ. ಮಹಿಳಾ ದಸರಾದಲ್ಲಿ ರಾಗಿ ಬೀಸಿ, ಭತ್ತಕುಟ್ಟಿ ಮಹಿಳೆಯರು ಸಂಭ್ರಮಿಸಿದ್ರೆ, ಮಕ್ಕಳ ದಸರಾದಲ್ಲಿ ಚಿಣ್ಣರ ಕಲರವ ಜೋರಾಗಿತ್ತು.
 

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಅರಮನೆಯಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ನಾಲ್ಕನೇ ದಿನದ ಯುವ ದಸರಾದಲ್ಲಿ(Yuva dasara)  ವಿವಿಧ ಶಾಲೆಯ ಮಕ್ಕಳು ಕರಕುಶಲ ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಶೈಕ್ಷಣಿಕ, ತಂತ್ರಜ್ಞಾನ ವಿಷಯಗಳ  ವಸ್ತು ಪ್ರದರ್ಶನಗಳನ್ನು ಮಾಡಿ ನೋಡುಗರ ಕಣ್ಮನ ಸೆಳೆಯಿತು. ಮಕ್ಕಳ ದಸರಾ ಉದ್ಘಾಟಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ(Madhubangarappa )  ಕಾರ್ಯಕ್ರಮಗಳನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ರು.. ಜೆ.ಕೆ.ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾ(women dasara) ಕೂಡಾ ಹಲವು ಗ್ರಾಮೀಣ ಕ್ರೀಡೆಗಳಿಂದ ಗಮನ ಸೆಳೆಯಿತು. ರಾಗಿ ಬೀಸುವ ಸ್ಪರ್ಧೆ, ಭತ್ತ ಕುಟ್ಟುವ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ, ಒಲೆರಹಿತ ಅಡಿಗೆ ಸ್ಪರ್ಧೆ ಹಾಗೂ ವೇಗದ ನಡಿಗೆ ಸ್ಪರ್ಧೆ ಮಹಿಳೆಯರು ಎಂಜಾಯ್ ಮಾಡುವಂತೆ ಮಾಡಿತ್ತು. ಯುವ ದಸರಾಗೆ  ಸ್ಯಾಂಡಲ್‌ವುಡ್ ನಟ, ನಟಿಯರು ಭಾಗವಹಿಸಿ ಮೆರುಗು ನೀಡಿದ್ರು. ಸಾಧು ಕೋಕಿಲ ಅಂಡ್ ಟೀಂ ಯುವ ಮನಸುಗಳನ್ನು ರಂಜಿಸಿದ್ರು. ಇತ್ತ ದಾಸರಾ ಆನೆಗಳ ಮಾವುತರ ಜೊತೆ ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಕಾಲ ಕಳೆದ್ರು.. ತಮ್ಮ ಹಳೆಯ ದಿನಗಳ ದಸರಾ ನೆನಪುಗಳನ್ನು ಮೆಲುಕು ಹಾಕಿದ್ರು.

ಇದನ್ನೂ ವೀಕ್ಷಿಸಿ:  ಯುವ ಸಿನಿಮಾಗಾಗಿ ಕಾದು ಕುಂತ ದೊಡ್ಮನೆ ಫ್ಯಾನ್ಸ್! ಸಲಾರ್‌ಗಾಗಿ ಯುವ ರಿಲೀಸ್ ತಡವಾಗುತ್ತಾ..?

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!