Tumakuru: ಅಲೆಮಾರಿ ಸಮುದಾಯದ ವ್ಯಕ್ತಿ ಜತೆ ಅನುಚಿತ ವರ್ತನೆ: ತಹಸೀಲ್ದಾರ್‌ ತೇಜಶ್ವಿನಿಗೆ ಸಂಕಷ್ಟ

Jan 29, 2022, 11:39 AM IST

ತುಮಕೂರು(ಜ.29): ಅಲೆಮಾರಿ ಸಮುದಾಯದ ಒಬ್ಬ ವ್ಯಕ್ತಿಯ ಜತೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್‌ ತೇಜಶ್ವಿನಿ ಅವರಿಗೆ ಸಂಕಷ್ಟ ಎದುರಾಗಿದೆ. ಕೇದಿಗೆಹಳ್ಳಿ ಗುಂಡು ತೋಪು ಮಳೆ ನೀರಿನಿಂದ ಆವೃತ್ತವಾಗಿತ್ತು. ಅದೇ ಸ್ಥಳದಲ್ಲಿ 11 ಅಲೆಮಾರಿ ಕುಟುಂಬಗಳು ವಾಸವಾಗಿದ್ದವು. ಗುಡಿಸಲಿಗೆ ನೀರು ನುಗ್ಗಿದ್ದರಿಂದ ಗಂಜಿ ಕೇಂದ್ರವನ್ನ ತೆರೆಯಲಾಗಿತ್ತು. 14 ದಿನಗಳ ಬಳಿಕ ಮನೆಗೆ ಹೋಗೋದಕ್ಕೆ ತಹಸೀಲ್ದಾರ್‌ ತೇಜಶ್ವಿನಿ ಸೂಚಿಸಿದ್ದರು. ಕೇದಿಗೆಹಳ್ಳಿ ಗುಂಡು ತೋಪು ನಿವಾಸಿ ಪರಮೇಶ್ವರ್‌ ಎಂಬುವರು ಪರಿಹಾರಕ್ಕೆ ತಹಸೀಲ್ದಾರ್‌ಗೆ ಮನವಿ ಮಾಡಿದ್ದರು. ಆದರೆ, ಪರಿಹಾರಕ್ಕೆ ಕೇಳಿದ್ದಕ್ಕೆ ತಹಸೀಲ್ದಾರ್‌ ತೇಜಶ್ವಿನಿ ಕೆರಳಿದ್ದರು. ಪರಮೇಶ್ವರ್‌ನನ್ನ ರೌಡಿಶೀಟರ್‌ನನ್ನಾಗಿ ಮಾಡುತ್ತೇನೆ ಅಂತ ತಹಸೀಲ್ದಾರ್‌ ತೇಜಶ್ವಿನಿ ಬೆದರಿಕೆಯೊಡಿದ್ದಾರೆ. ಪರಮೇಶ್ವರ್‌ ತಂದೆ ಆಧಾರ್‌ ಬ್ಲಾಕ್‌ ಮಾಡುತ್ತೇನೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಕಚೇರಿಯಿಂದ ಪರಮೇಶ್ವರ್‌ ಕುಟುಂಬವನ್ನ ಹೊರದಬ್ಬುವಂತೆ ಸೂಚನೆ ಕೊಟ್ಟಿದ್ದಾರೆ. 

Niyokov Variant: ಹೊಸ ವೈರಸ್‌ ಪತ್ತೆ , ಬಾವಲಿಯಿಂದ ಮನುಷ್ಯರಿಗೆ ಹಬ್ಬುವ ಭೀತಿ