ಪೊಲೀಸರಿಂದ ಬಿಡಾಡಿ ದನಗಳ ಹಿಡಿಯುವ ಕಾರ್ಯಾಚರಣೆ! ರಾಸುಗಳನ್ನು ರಸ್ತೆಗೆ ಬಿಟ್ಟರೆ ಕೇಸ್‌ ಹಾಕುವುದಾಗಿ ಮಾಲೀಕರಿಗೆ ಎಚ್ಚರಿಕೆ

Jul 14, 2024, 5:50 PM IST

ಚಿಕ್ಕಮಗಳೂರು: ದನ ಹಿಡಿಯಲು ಚಿಕ್ಕಮಗಳೂರು (Chikkamagaluru) ಎಸ್‌ಪಿ ವಿಕ್ರಂ ಅಮಟೆ(SP Vikram Amate) ರಸ್ತೆಗಿಳಿದಿದ್ದರು. ಪೊಲೀಸರಿಂದ ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳ (Cattle) ಹಿಡಿಯುವ ಕಾರ್ಯಾಚರಣೆ ನಡೆಯಿತು. ನಗರದಲ್ಲಿ ಹಗಲಿರುಳೆನ್ನದೇ ದನಗಳ ಓಡಾಟದಿಂದ ಸಾಕಷ್ಟು ವಾಹನಗಳ ಅಪಘಾತವಾಗಿತ್ತು. ಖುದ್ದು ರಸ್ತೆಗೆ ಇಳಿದು ಬಿಡಾಡಿ ದನಗಳನ್ನು ಎಸ್‌ಪಿ ವಿಕ್ರಮ್ ಅಮಟೆ ಹಿಡಿದರು. ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್, ಕೆ.ಎಂ.ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಒಟ್ಟು 4 ಹಸುಗಳನ್ನ ಹಿಡಿದು ಗೋ ಶಾಲೆಗೆ ಪೊಲೀಸರು(Police) ಬಿಟ್ಟಿದ್ದಾರೆ. ರಸ್ತೆಯಲ್ಲಿ ಹಸು ಅಡ್ಡ ಬಂದ ಕಾರಣ ಇಬ್ಬರ ಸಾವಾಗಿತ್ತು. ಬೈಕಿನಿಂದ 60ಕ್ಕೂ ಹೆಚ್ಚು ಬೈಕ್ ಸವಾರರು ಬಿದ್ದಿದ್ದಾರೆ. ಪೊಲೀಸರಿಗೆ ಅಗ್ನಿಶಾಮಕ ದಳ, ಪಶುಸಂಗೋಪನಾ ಇಲಾಖೆ ಸಾಥ್ ನೀಡಿದೆ. ದಂಡ ಕಟ್ಟಿ ದನಗಳನ್ನು ಬಿಡಿಸಿಕೊಂಡು ಹೋಗಲು ಮಾಲೀಕರಿಗೆ ಸೂಚನೆ ನೀಡಲಾಗಿದ್ದು, ರಾಸುಗಳನ್ನ ರಸ್ತೆಗೆ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಹತ್ತಾರು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 

ಇದನ್ನೂ ವೀಕ್ಷಿಸಿ:  ಮೋದಿಗೆ ಮುಂದೆ RSSನ ಅವಶ್ಯಕತೆ ಇಲ್ವಾ..? ನಿತಿನ್ ಗಡ್ಕರಿಯಿಂದ ಬಯಲಾಯ್ತಾ ಮೋದಿ-ಆರ್‌ಎಸ್ಎಸ್ ಮುನಿಸು?