ಘಾಟಿಯೇ ಅಲ್ಲೋಲ ಕಲ್ಲೋಲವಾಗಿದ್ರೂ ಈ ಪ್ರದೇಶ ಅಲುಗಾಡಿಲ್ಲ: ಚಾರ್ಮಾಡಿ ಘಾಟ್ ರಹಸ್ಯ!

Sep 24, 2021, 10:58 PM IST

ಚಿಕ್ಕಮಗಳೂರು, (ಸೆ.24): ಚಾರ್ಮಾಡಿ ಘಾಟ್  ದಕ್ಷಿಣ ಕನ್ನಡ ಮಲೆನಾಡಿನ ಸಂಪರ್ಕ ಸೇತುವೆ.  ಎತ್ತ ನೋಡಿದ್ರೂ ಹಸಿರ ಸಿರಿಯ ಸೊಬಗು, ಹತ್ತಿರ ಹೋಗಿ ನೋಡಿದ್ರೆ ಊಹಿಸಲು ಅಸಾಧ್ಯವಾದಂತಹ ಆಳವಾದ ಪ್ರಪಾತ. ದಟ್ಟಾರಣ್ಯದಿಂದ ಕೂಡಿರುವ ಕಣಿವೆ ಚಾರ್ಮಾಡಿ ಘಾಟ್ ಇರುವುದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ. ಮೊದಲೇ ಸಾಕಷ್ಟು ತಿರುವುಗಳಿಂದ ಕೂಡಿರುವ ಧರ್ಮಸ್ಥಳದ ಮಾರ್ಗವಾಗಿರುವ  ಕೊಟ್ಟಿಗೆರೆಹಾರ ಗ್ರಾಮದಿಂದ ಚಾರ್ಮಾಡಿವರೆಗೂ ಘಾಟ್ ಪ್ರದೇಶವನ್ನು ಕಾಣಬಹುದಾಗಿದೆ.

ಚಾರ್ಮಾಡಿ ಘಾಟ್‌ನಲ್ಲಿ ಜಲಧಾರೆಗಳ ಹೊಸ ಲೊಕ, ಕಣ್ಮನಗಳಿಗೆ ಹಬ್ಬ..!

 ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಈ ಅಂಕುಡೊಂಕಿನ ರಸ್ತೆ ಯಲ್ಲಿ ಸಾಗುತ್ತಿದ್ದರೆ ಸ್ವಚ್ಛಂದ ಪರಿಸರವನ್ನು ಸವಿಯಬಹುದು. ಮೋಡ ಮತ್ತು ಮಂಜಿನ ಸಮ್ಮಿಶ್ರಣದ ವಾತಾವರಣ ಅಹ್ಲಾದಕರ ಎನಿಸುತ್ತದ. ಒಂದೊಮ್ಮೆ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತವಾದ್ರೆ ಕರಾವಳಿ ಮತ್ತು ಮಲೆನಾಡಿನ ಸಂಪರ್ಕವೇ ಕಟ್ ಆಗಿತ್ತೆ, ಅಂತಹ ಚಾರ್ಮಾಡಿ ಘಾಟ್ ನ ರಸ್ತೆಯಲ್ಲಿ ಆಗೋಚರವಾದ ಶಕ್ತಿಯೊಂದು ಇದೆ, ಆ ಶಕ್ತಿ ಇಲ್ಲಿನ ಸಾಗುವ ಪ್ರಯಾಣಿಕರು, ಗ್ರಾಮಸ್ಥರಿಗೆ ಶ್ರೀ ರಕ್ಷೆಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.