ಕೇರಳದ ಜೈ ಹಿಂದ್ ಚಾನೆಲ್ ಮತ್ತು ಡಿಕೆಶಿ..ಏನಿದರ ಗುಟ್ಟು..? ರಾಜಕೀಯ ಷಡ್ಯಂತ್ರ ಅಂದಿದ್ದೇಕೆ ಡಿಸಿಎಂ..?

ಕೇರಳದ ಜೈ ಹಿಂದ್ ಚಾನೆಲ್ ಮತ್ತು ಡಿಕೆಶಿ..ಏನಿದರ ಗುಟ್ಟು..? ರಾಜಕೀಯ ಷಡ್ಯಂತ್ರ ಅಂದಿದ್ದೇಕೆ ಡಿಸಿಎಂ..?

Published : Jan 03, 2024, 01:00 PM IST

ಸಿಬಿಐ ಚಕ್ರವ್ಯೂಹದಲ್ಲಿ ಬಂಧಿಯಾಗ್ತಾರಾ ಕನಕಪುರದ ಬೇಟೆಗಾರ..?
ಕೇಸ್ ವಾಪಸ್ ಪಡೆದರೂ ಕನಕಾಧಿಪತಿಗೆ ತಪ್ಪಲ್ವಾ ಸಿಬಿಐ ಕಂಟಕ..?
ಡಿಕೆ ಶಿವಕುಮಾರ್‌ ಕೊರಳಿಗೆ ಉರುಳಾಗುತ್ತಾ "ಅಕ್ರಮ ಆಸ್ತಿ" ರಹಸ್ಯ..?

ರಾಜಕೀಯದಲ್ಲಿ ಅದೆಷ್ಟೋ ಚಕ್ರವ್ಯೂಹಗಳನ್ನು ಭೇದಿಸಿ ನಿಂತಿರೋ ಬೇಟೆಗಾರನಿಗೆ ಸಿಬಿಐ(CBI) ಚಕ್ರವ್ಯೂಹ. ರಣರಂಗದ ಚದುರಂಗದಲ್ಲಿ ಅತಿ ರೋಚಕ ದಾಳಗಳನ್ನು ಉರುಳಿಸಿ ಸೈ ಎನಿಸಿಕೊಂಡ ಚಾಣಾಕ್ಷನ ಮುಂದೆ ಮತ್ತದೇ ಚಕ್ರವ್ಯೂಹ. ಆ ಚಕ್ರವ್ಯೂಹದ ಮುಂದೆ ನಿಂತಿರೋ ಡಿಕೆ ಶಿವಕುಮಾರ್(DK Shivakumar), ಜೈಲಿಗೆ ಹಾಕೋದಾದ್ರೆ ಹಾಕ್ಲಿ, ರೆಡಿ ಇದ್ದೇನೆ ನಾನು ಅಂತಿದ್ದಾರೆ. ಡಿಕೆ ಶಿವಕುಮಾರ್ ಅವ್ರನ್ನು ರಾಜಕೀಯದಲ್ಲಿ ಅಂಜದ ಗಂಡು, ಎಂಟೆದೆ ಬಂಟ ಅಂತ ಕರೀತಾರೆ. ಅಂತಹ ಬಹದ್ದೂರ್ ಗಂಡೇ, ಕಂಪಿಸಿದ ಧ್ವನಿಯಲ್ಲಿ ಮಾತನಾಡ್ತಿದ್ದಾರೆ ಅಂದ್ರೆ ಅಲ್ಲೇನೋ ನಡೆದಿರ್ಲೇಬೇಕು.ಡಿಕೆ ಸಾಹೇಬನ ಕೋಟೆಯೊಳಗೆ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಕನಕಪುರದ ಬೇಟೆಗಾರನನ್ನು ಬೇಟೆಯಾಡಲು ಹೊಂಚು ಹಾಕ್ತಿರೋ ಸಿಬಿಐ, ಡಿಕೆಶಿಗೆ ಮತ್ತೆ ಶಾಕ್ ಕೊಟ್ಟಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವ್ರಿಗೆ ಇಡಿ, ಐಟಿ, ಸಿಬಿಐ ಕೇಸ್'ಗಳೆಲ್ಲಾ ಹೊಸನೇತಲ್ಲ. 2017ರಲ್ಲಿ ಶುರುವಾದ ಈ ಕೇಸ್'ಗಳ ಸರಮಾಲೆ, ಬೆನ್ನು ಬಿಡದ ಬೇತಾಳನಂತೆ ಡಿಕೆಶಿಯವ್ರನ್ನ ಕಾಡ್ತಾನೇ ಇವೆ. ಆ ಕೇಸ್"ಗಳ ಕಾರಣದಿಂದ ಡಿಕೆಶಿ, ಅದೆಷ್ಟು ರಾತ್ರಿಗಳನ್ನ ನಿದ್ದೆಯಿಲ್ಲದೆ ಕಳೆದಿದ್ದಾರೋ ಗೊತ್ತಿಲ್ಲ. ಒಂದಾದ ಮೇಲೊಂದರಂತೆ ಕೇಸ್'ಗಳ ಮೇಲೆ ಕೇಸ್.. ಒಮ್ಮೆ ಐಟಿ, ಮತ್ತೊಮ್ಮೆ ಇಡಿ, ಮಗದೊಮ್ಮೆ ಸಿಬಿಐ. ಈ ಕೇಸ್"ಗಳೆಲ್ಲಾ ಡಿಕೆ ಶಿವಕುಮಾರ್ ಅವ್ರನ್ನು ಅದೆಷ್ಟರ ಮಟ್ಟಿಗೆ ಅಲುಗಾಡಿಸಿ ಬಿಟ್ಟಿವೆ ಅಂದ್ರೆ, ಯಾವುದಕ್ಕೂ ಹೆದರಲ್ಲ ಅಂತಿದ್ದ ಡಿಕೆಶಿ 2019ರಲ್ಲಿ ಕಣ್ಣೀರು ಹಾಕ್ತಾ ಜೈಲಿಗೆ ಹೋಗುವಂತಾಗಿತ್ತು.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್-ಬಿಜೆಪಿ ನಡುವೆ ಭುಗಿಲೆದ್ದ ‘ಕರಸೇವಕ’ ಫೈಟ್: ಹಳೇ ಕೇಸ್ ಕೆದಕುವ ಹಿಂದೆ ರಾಜಕೀಯ ಇದ್ಯಾ..?

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more