Nov 10, 2021, 12:50 PM IST
ಮಂಡ್ಯ( ನ.10) : ಕಾವೇರಿ ಹೊರಾಟಗಾರರಿಗೆ ಕಾನೂನು ಕಂಟಕ ತಪ್ಪಿಲ್ಲ. ಕಾವೇರಿ ನೀರಿಗಾಗಿ 2016ರಲ್ಲಿ ನಡೆದ ಉಗ್ರ ಹೋರಾಟಕ್ಕೆ ಸಂಬಂಧಿಸಿದಂತೆ ಹೋರಾಟಗಾರರಿಗೆ ಸಮನ್ಸ್ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಉಗ್ರ ಹೋರಾಟಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಯಾಗಿದೆ.
ಕಾವೇರಿ ನದಿ ಕಲುಷಿತ ತಡೆಗೆ ಕಾರ್ಯಯೋಜನೆ : ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್
ಪ್ರತಿಭಟನೆ ವೇಳೆ ಕಲ್ಲು ತುರಾಟ, ಸಾರ್ವಜನಿಕ ಆಸ್ತಿ ನಾಶವಾಗಿದೆ ಎಂದು 189 ಹೋರಾಟಗಾರರ ಮೇಲೆ ಕೇಸ್ ದಾಖಲಿಸಲಾಗಿತ್ತು. ಆದರೆ ಕೇಸ್ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದಿಗ ಕೇಸ್ ವಾಪಸ್ ಪಡೆವ ಬದಲು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹೋರಾಟಗಾರ ಮುಖಂಡರು ನಾವು ನಿರಂತರವಾಗಿ ನಡೆಸಿದ ಕಾವೇರಿ ಹೋರಾಟಕ್ಕೆ ಇದೀಗ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿ ಸಮನ್ಸ್ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.