Feb 4, 2021, 4:07 PM IST
ಚಿಕ್ಕಮಗಳೂರು (ಫೆ.04): ಜನಸಾಮಾನ್ಯರಿಗೆ ಬೇಜಾರಾದ್ರೆ ಸಿನಿಮಾ, ಆಟ, ಟೂರು ಅದು-ಇದು ಅಂತೆಲ್ಲಾ ಸುತ್ತಾಡ್ತಾರೆ. ಆದ್ರೆ, ವರ್ಷಪೂರ್ತಿ ಹೊಲಗದ್ದೆಗಳಲ್ಲಿ ಗಾಣದೆತ್ತುಗಳಂತೆ ದುಡಿಯೋ ಮೂಕಪ್ರಾಣಿಗಳೇನು ಮಾಡಬೇಕು. ಅದಕ್ಕಾಗಿ, ಹೊಲ-ಗದ್ದೆಗಳಲ್ಲಿ ಉಳುಮೆ ಕಾರ್ಯಗಳೆಲ್ಲಾ ಮುಗಿದ ನಿಮಿತ್ತ ಚಿಕ್ಕಮಗಳೂರಿನಲ್ಲಿ ಎತ್ತುಗಳಿಗಾಗಿಯೇ ಜೋಡೆತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿದ್ರು.
ಎತ್ತುಗಳ ಮೇಲೆ 14 ಟನ್ ಕಬ್ಬು: ಪ್ರಕರಣ ದಾಖಲು ...
ರಾಜ್ಯದ ಮೂಲೆಮೂಲೆಗಳಿಂದ ಬಂದ ಎತ್ತುಗಳು ನೋಡುಗರ ಮನಸೆಳೆದ್ವು. ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ 17ನೇ ವರ್ಷದ ಜೋಡೆತ್ತಿನ ಗಾಡಿ ಸ್ಪರ್ಧೆ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೆ ನಿರ್ಮಿಸಿತ್ತು.