Chikkamagaluru: ಆಧುನಿಕತೆಯ ಭರಾಟೆ ನಡುವೆಯೂ ಜೋಡೆತ್ತಿನ ಗಾಡಿ ಸ್ಪರ್ಧೆ

Chikkamagaluru: ಆಧುನಿಕತೆಯ ಭರಾಟೆ ನಡುವೆಯೂ ಜೋಡೆತ್ತಿನ ಗಾಡಿ ಸ್ಪರ್ಧೆ

Published : Apr 16, 2022, 12:29 PM IST

*  ಚಿಕ್ಕಮಗಳೂರಿನ ತೇಗೂರು ಗ್ರಾಮದಲ್ಲಿ ನಡೆದ ಎತ್ತಿನಗಾಡಿ ಸ್ಪರ್ಧೆ
*  ಯುಗಾದಿ, ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ
*  ರಾಜ್ಯದ ನಾನಾ ಭಾಗದಿಂದ ಆಗಮಿಸಿದ್ದ 300ಕ್ಕೂ ಅಧಿಕ ಜೋಡೆತ್ತುಗಳು
 

ಚಿಕ್ಕಮಗಳೂರು(ಏ.16):  ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದ್ರಲ್ಲೂ ಹಳ್ಳಿಗಳು ನಿಧಾನವಾಗಿ ಆಧುನಿಕರಣದತ್ತ ಮುಖಮಾಡುತ್ತಿದ್ದಂತೆ ರೈತರು ಪಾಲ್ಗೊಳ್ಳುತ್ತಿದ್ದ ಅದೆಷ್ಟೋ ಹಳ್ಳಿ ಸೊಗಡಿನ ಕ್ರೀಡೆಗಳು ಮಾಯವಾಗಿವೆ. ಗ್ರಾಮೀಣ ಕ್ರೀಡೆಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ವರ್ಷಪೂರ್ತಿ ಹೊಲ ಗದ್ದೆಗಳಲ್ಲಿನ ಉಳುಮೆ ಕಾರ್ಯಗಳೆಲ್ಲ ಮುಗಿದ ನಿಮಿತ್ತ ಚಿಕ್ಕಮಗಳೂರಿನಲ್ಲಿ ಎತ್ತುಗಳಿಗಾಗಿಯೇ ಎತ್ತಿನಗಾಡಿಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯ ಮೂಲೆಮೂಲೆಗಳಿಂದ ಬಂದು ಯುದ್ಧಕ್ಕೆ ಸನ್ನದ್ದರಾದಂತಿದ್ದ ಎತ್ತುಗಳು ನೋಡುಗರ ಗಮನಸೆಳೆದಿವೆ.

ರಾಸುಗಳಿಗಾಗೇ ಚಿಕ್ಕಮಗಳೂರಿನ ತೇಗೂರಿನಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನ ಏರ್ಪಡಿಸಿದ್ರು. ಜೋಡೆತ್ತಿನಗಾಡಿ ಸ್ಪರ್ಧೆಯೂ ಯುಗಾದಿ ಹಬ್ಬ ಹಾಗೂ ಹನುಮ ಜಯಂತಿ ಅಂಗವಾಗಿ ನಡೆಯಿತು. ಅರಸು ಗೆಳೆಯರ ಬಳಗ ನಡೆಸ್ತಿರೋ ಈ ಸ್ಪರ್ಧೆಗೆ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ ಸೇರಿ ರಾಜ್ಯದ ನಾನಾ ಭಾಗದಿಂದ 300ಕ್ಕೂ ಅಧಿಕ ಜೋಡೆತ್ತುಗಳು ಆಗಮಿಸಿದ್ದವು. ಗ್ರಾಮೀಣ ಕ್ರೀಡೆಯನ್ನ ಉತ್ತೇಜಿಸೋ ಸಲುವಾಗಿ ಇಲ್ಲಿ ಗೆದ್ದ ರಾಸುಗಳಿಗೆ ಆಕರ್ಷಕ ಬಹುಮಾನವನ್ನು ನೀಡ್ತಾರೆ. ಗ್ರಾಮೀಣ ಕ್ರೀಡೆಗಳು ನಶಿಸ್ತಿವೆ ಅನ್ನೋ ಕೂಗು ಚಿಕ್ಕಮಗಳೂರಿಗೆ ಅನ್ವಯವಾಗುವುದಿಲ್ಲ, ಯಾಕಂದ್ರೆ, ಇಲ್ಲಿ ಆಗಿಂದಾಗ್ಗೆ ಇಂತಹಾ ಗ್ರಾಮೀಣ ಕ್ರೀಡೆಗಳು ನಡೆಯುತ್ತಲೇ ಇರುತ್ತವೆ. 

ಈಶ್ವರಪ್ಪ ಬಂಧನ ಆಗ್ರಹಿಸಿ ಕಾಂಗ್ರೆಸ್‌ ರಾಜ್ಯವ್ಯಾಪಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಡಿಕೆಶಿ ನೇತೃತ್ವ!

ಜನರತ್ತ ನುಗ್ಗಿ ಬರೋ ಎತ್ತಿನ ಗಾಡಿಗಳಿಂದ ತಪ್ಪಿಸಿಕೊಳೋದು ಪ್ರೇಕ್ಷಕರಿಗೆ ಹರಸಾಹಸವೇ ಸರಿ. ಇನ್ನು ರೈತರು ಸ್ಪರ್ಧೆಗಾಗಿಯೇ ಎತ್ತುಗಳನ್ನ ಮೀಸಲಿಡ್ತಾರೆ. ಕೆಲ ರೈತರು ಹೊಲ ಗದ್ದೆಗಳಲ್ಲಿನ ಕೆಲಸ ಮುಗಿದ ಮೇಲೆ ಇಂತಹ ಆಟೋಟಗಳಲ್ಲಿ ತಮ್ಮ ರಾಸುಗಳನ್ನ ಓಡಿಸಿ ಖುಷಿ ಪಡ್ತಾರೆ. ಕೆಲವರು ಇಂತಹ ಸ್ಪರ್ಧೆಗಳಿಗಾಗಿಯೇ ರಾಸುಗಳನ್ನ ಸಾಕ್ತಾರೆ. ಸ್ಪರ್ಧೆಯ ಹದಿನೈದು ದಿನ ಮುಂಚಿತವಾಗಿಯೇ ಎತ್ತುಗಳಿಗೆ ವಿಶೇಷ ತರಬೇತಿ ಜೊತೆ ತಯಾರಿಯನ್ನೂ ಮಾಡ್ತಾರೆ. ಪ್ರತಿ ದಿನ ವಾಕ್ ಮಾಡಿಸುತ್ತಾರೆ. ದಿನಕ್ಕೆರಡು ಬಾರಿ ಈಜು ಹೊಡೆಸುತ್ತಾರೆ. ಇಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳದ ಜೊತೆ ಮೊಟ್ಟೆ ಹಾಗೂ ಮೆಂತೆ ಮುದ್ದೆಯನ್ನೂ ನೀಡ್ತಾರೆ. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲೊದ್ಕಿಂತ ಭಾಗವಹಿಸೋದೆ ರೈತರಿಗೆ ಸಂತಸ. ಮಲೆನಾಡಿನಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನ ಎಂಟತ್ತು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ರು. ಸ್ಪರ್ಧೆಯನ್ನ ನೋಡಿದ ರೈತರು ಇಂತಹಾ ಕ್ರೀಡೆಗಳು ನಿರತಂರವಾಗಿರಲೆಂದು ಹಾರೈಸಿದ್ರು.

ಒಟ್ಟಾರೆ, ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸ್ತಿರೋ ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು. ಇಂತಹ ಕಾರ್ಯಕ್ರಮಗಳ ನೆಪದಲ್ಲಾದರೂ ಗ್ರಾಮೀಣ ಕ್ರೀಡೆಗಳು ಉಳಿಯಲಿ, ಬೆಳೆಯಲಿ ಅನ್ನೋದು ನಮ್ಮ ಆಶಯ.
 

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!