ಆಟ ಆಡೋ ವಯಸ್ಸಲ್ಲಿ ದಾಖಲೆ ಬರೆದ ಬಾಲಕ: ಸ್ಕೇಟಿಂಗ್ ಆಡುತ್ತಾ ನಿಮಿಷದಲ್ಲೇ ಸಾಲ್ವ್ ಆಗುತ್ತೆ ರೂಬಿಕ್ಸ್ ಕ್ಯೂಬ್ !

Sep 28, 2023, 11:27 AM IST

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾ ಹೇಳೋದು ಇದಕ್ಕೆ ನೋಡಿ, ಯಾರ ಸಹಾಯವಿಲ್ಲದೆ, ಕಡಿಮೆ ಬಂಡವಾಳದಲ್ಲಿ ತನ್ನ ಸ್ವಂತ ಶ್ರಮದಿಂದ ತುಂಬಾ ಸಲೀಸಾಗಿ ವಿಶ್ವ ಮಟ್ಟದ ರೆಕಾರ್ಡ್ ಮಾಡಿದ್ದಾನೆ.. 8 ವರ್ಷದ ಈ ದಾಖಲೆ ವೀರನ ಹೆಸರು ಹೋಶಾಂತ್. ಗಂಟೆಗಟ್ಟಲೆ ಕೂತರೂ ಪರಿಹಾರವಾಗದ ರೂಬಿಕ್ಸ್ ಕ್ಯೂಬ್(Rubik Cubes), ರಸ್ತೆ ಮೇಲೆ ಗಮನವಿಟ್ಟರೂ ಬೀಳುವಂತಾಗುವ ಸ್ಕೇಟಿಂಗ್, ಈ ಎರಡೂ ಆಟವನ್ನ ಈ ಪುಟಾಣಿ ಹೋಶಾಂತ್ ಸಾಧಿಸಿ ತೋರಿಸಿದ್ದಾನೆ. ಈ ಪುಟ್ಟ ಬಾಲಕ ಒಂದು ಗಂಟೆ ಹದಿಮೂರು ನಿಮಿಷಕ್ಕೆ ಹತ್ತೊಂಬತ್ತು ವಿಭಿನ್ನ ರೂಬಿಕ್ಸ್ ಕ್ಯೂಬ್ ಆಟ ಆಡಿ ವಿಶ್ವ ದಾಖಲೆ(world record) ಮಾಡಿದ್ದಾನೆ. ಈ ಪುಟ್ಟ ಬಾಲಕ ಯಶವಂತಪುರದ ಡಿವೈನ್ ಇಂಗ್ಲಿಷ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದು, ಶಾಲೆಯಿಂದ ಮನೆಗೆ ಹಾಗೂ ಮನೆಯಿಂದ ಶಾಲೆಗೆ ಹೋಗುವಾಗ ಸಮಯ ಹಾಳು ಮಾಡ್ಬಾರ್ದು ಅಂತಾ ಅಪ್ಪನ ಬೈಕ್ ಹಿಂದೆ ಕುಳಿತು ರೂಬಿಕ್ಸ್ ಕ್ಯೂಬ್ ಪ್ರಾಕ್ಟಿಸ್ ಮಾಡಿದ್ದಾನೆ. ಯೂಟ್ಯೂಬ್ ನೋಡಿಕೊಂಡೇ ಈ ಆಟ ಕಲಿತಿರೊ ಹೋಶಾಂತ್, ಮುಂದಿನ ದಿನಗಳಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಆಡುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಕನಸು ಕಾಣ್ತಿದ್ದಾನೆ. ಈ ಪೋರನಿಗೆ ಶಿಕ್ಷಕರು ಬೆಂಬಲ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ